ಮೆಗಾಸ್ಟಾರ್ ಚಿತ್ರದಲ್ಲಿ ನಟಿಸಲು ತಿರಸ್ಕರಿಸಿದ್ರಾ ಸಲ್ಮಾನ್​ ಖಾನ್?

ಮೆಗಾಸ್ಟಾರ್ ಚಿತ್ರದಲ್ಲಿ ನಟಿಸಲು ತಿರಸ್ಕರಿಸಿದ್ರಾ ಸಲ್ಮಾನ್​ ಖಾನ್?

ಟಾಲಿವುಡ್​ನ ಮೆಗಾಸ್ಟಾರ್​ ಜಿರಂಜೀವಿ ಶೀಘ್ರದಲ್ಲೇ ನಟ ಮೋಹನ್ ಲಾಲ್​ ಆಭಿನಯದ ಮಲಯಾಳಂನ ಹಿಟ್​ ಸಿನಿಮಾ ಲೂಸಿಫರ್‌ನ ತೆಲಗು ರಿಮೇಕ್​ನಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಮೋಹನ್​ರಾಜ್ ಌಕ್ಷನ್ ​ಕಟ್​ ಹೇಳುತ್ತಿರುವ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನ ನಿಭಾಯಿಸಲು ಬಾಲಿವುಡ್​ ನಟ ಸಲ್ಮಾನ್​​ ಖಾನ್​ರನ್ನ ಸಂಪರ್ಕಿಸಲಾಗಿದೆ ಎಂದು ಹೇಳಲಾಗಿದೆ.

blank

ಆದ್ರೆ ಸಲ್ಲು ಬಾಯ್ ಅತಿಥಿ ಪಾತ್ರವನ್ನು ನಿರ್ವಹಿಸಲು ತಿರಸ್ಕರಿಸಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ಮತ್ತು ಚಿರಂಜೀವಿ ಒಳ್ಳೆ ಬಾಂಧವ್ಯವನ್ನ ಹೊಂದಿದ್ದಾರೆ. ಇನ್ನು ಚಿರಂಜೀವಿ ಪುತ್ರ, ರಾಮ್ ಚರಣ್ ಕೂಡ ಸಲ್ಮಾನ್ ಜೊತೆ ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ. ಹಿಂದೊಮ್ಮೆ ಸಲ್ಲು ಜಿರಂಜೀವಿಯವರ ಆರ್ಚಾಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ಸಲ್ಲು ಆರ್ಚಾಯದಲ್ಲಿ ನಟಿಸೋದಿಲ್ಲ ಅಂತ ಕನ್ಫರ್ಮ್​ ಕೂಡ ಆಗಿತ್ತು.

blank

ಮಲಯಾಳಂನ ಲೂಸಿಫರ್​ ಚಿತ್ರದಲ್ಲಿ ನಟ ಪೃಥ್ವಿರಾಜ್ ನಿರ್ವಹಿಸಿದ ಪಾತ್ರವನ್ನು ನಿಭಾಯಿಸಲು ತೆಲುಗು ಲೂಸಿಫರ್​ ಚಿತ್ರತಂಡ ಸಲ್ಮಾನ್​ ಖಾನ್​ ಅವರನ್ನ ಸಂಪರ್ಕಿಸಿದ್ಯಂತೆ. ಆದ್ರೆ ಸಲ್ಲು ಮಾತ್ರ ಈ ಬಗ್ಗೆ ಯಾವುದೇ ಅಸಕ್ತಿ ತೋರಿಸದಿರುವುದರ ಹಿಂದಿನ ಅಸಲಿ ಕಾರಣ ಇನ್ನು ತಿಳಿದಿಲ್ಲ.

ಮತ್ತೊಂದೆಡೆ ಈ ಅತಿಥಿ ಪಾತ್ರವನ್ನು ನಿಭಾಯಸಲು ಚಿತ್ರ ತಂಡ ಚಿಯಾನ್ ವಿಕ್ರಮ್​ರನ್ನ ಮತ್ತೊಂದು ಆಯ್ಕೆಯಾಗಿ ಆರಿಸಿದ್ದಾರೆ ಅಂತಾ ಹೇಳಲಾಗಿದೆ. ಅದ್ರೆ ಲೂಸಿಫರ್​ ಚಿತ್ರದ ಅತಿಥಿ ಪಾತ್ರವನ್ನು ನಿರ್ವಹಿಸೋದು ಯಾರು ಅಂತಾ ಚಿತ್ರ ತಂಡ ಶೀಘ್ರದಲ್ಲೇ ಅಧಿಕೃತ ಘೊಷಣೆ ಮಾಡಲಿದೆ.

Source: newsfirstlive.com Source link