ಯುಎಇ, ಒಮಾನ್‌ನಲ್ಲಿ ನಡೆಯಲಿರೋ ICC ಟಿ-20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ಯುಎಇ, ಒಮಾನ್‌ನಲ್ಲಿ ನಡೆಯಲಿರೋ ICC ಟಿ-20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ

ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಒಮನ್, ಶ್ರೀಲಂಕಾ, ಬಾಂಗ್ಲಾದೇಶ, ಪಿಎನ್ ಜಿ (papua new guinea), ನೆದರ್​​ಲೆಂಡ್​, ಐರ್ಲೆಂಡ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಸೂಪರ್-12 ಅರ್ಹತೆಗಾಗಿ ಕ್ವಾಲಿಫೈಯರ್​ ರೌಂಡ್​​ನಲ್ಲಿ ಸೆಣಸಾಡಲಿವೆ.

ಟೂರ್ನಿಯ ಪ್ರಮುಖ ಪಂದ್ಯಗಳು ಅಕ್ಟೋಬರ್ 23ರಿಂದ ಯುಎಇಯಲ್ಲಿ ನಡೆಯಲಿದೆ. ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು ಗ್ರೂಪ್ 1ನಲ್ಲಿವೆ. ಇನ್ನೂ ಅರ್ಹತಾ ಸುತ್ತಿನಲ್ಲಿ ಕ್ವಾಲಿಫೈಯರ್​ ಆದ ಎರಡು ತಂಡಗಳೂ ಸೇರಿಕೊಳ್ಳಲಿವೆ. ಗ್ರೂಪ್-2ರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ. ಇದರ ಜೊತೆಗೆ ಅರ್ಹತೆ ಸುತ್ತಿನಿಂದ ಎರಡು ತಂಡಗಳು ಎಂಟ್ರಿ ಪಡೆಯಲಿವೆ.

ಅಕ್ಟೋಬರ್ 23ರಂದು ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಅಕ್ಟೋಬರ್ 24 ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಭಾರತದ0 ಆರಂಭವಾಗಲಿವೆ. ನವೆಂಬರ್ 10, 11 ರಂದು ಸೆಮಿಫೈನಲ್ಸ್ ನಡೆಯಲಿದ್ದು, ಫೈನಲ್ ನವೆಂಬರ್ 14 ರಂದು ನಡೆಯಲಿದೆ.

ಇದನ್ನೂ ಓದಿ: T20 World Cup: ಇಂಡೋ-ಪಾಕ್​ ನಡುವಿನ ಹೈ-ವೋಲ್ಟೇಜ್ ಮ್ಯಾಚ್​​ ಡೇಟ್​​​ ಫಿಕ್ಸ್​

Source: newsfirstlive.com Source link