ಎಂಜಾಯ್ ಮೂಡ್​ನಲ್ಲಿ ಹಾರ್ದಿಕ್ ಪಾಂಡ್ಯ!

ಎಂಜಾಯ್ ಮೂಡ್​ನಲ್ಲಿ ಹಾರ್ದಿಕ್ ಪಾಂಡ್ಯ!

ಟೀಮ್​​​ ಇಂಡಿಯಾದ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿದ್ದು. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ 2ನೇ ಚರಣಕ್ಕೆ ಸಜ್ಜಾಗಿದ್ದಾರೆ. ಟೂರ್ನಿ ಆರಂಭಕ್ಕೆ ಒಂದು ತಿಂಗಳು ಬಾಕಿಯಿದ್ದು, ಈ ಸಮಯವನ್ನ ಸಖತ್ ಎಂಜಾಯ್ ಮಾಡ್ತಿರುವಂತೆ ಕಾಣ್ತಿದೆ.

ಅದ್ರಲ್ಲೂ ಇನ್ಸ್​​​​ಟಾಗ್ರಾಮ್‌ನಲ್ಲಿ ಒಂದು ಪೋಟೋ ಶೇರ್​ ಮಾಡಿದ್ದು, ಈ ಫೋಟೋದಲ್ಲಿ ವಿವಿಧ ಬಗೆಯ ಭಕ್ಷ್ಯಗಳನ್ನ ತಮ್ಮ ಮುಂದಿಟ್ಟುಕೊಂಡಿದ್ದಾರೆ. ಈ ಫೋಟೋಗೆ ಅತ್ಯುತ್ತಮ ಆಹಾರ, ಅತ್ಯುತ್ತಮ ವೈಬ್ ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ ಮತ್ತೊಂದು ಪೋಸ್ಟ್​ನಲ್ಲಿ ಪನಾಮ ಟೋಪಿ, ನೀಲಿ ಶರ್ಟ್​ ಧರಿಸಿರುವ ಫೋಟೋವನ್ನ ಶೇರ್​ ಮಾಡಿದ್ದಾರೆ. ಸದ್ಯ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಶೇರ್ ಮಾಡಿದ ಕೆಲ ಗಂಟೆಗಳಲ್ಲೇ ಅಧಿಕ ಲೈಕ್ಸ್​ ಪಡೆದುಕೊಂಡಿದೆ. ಇನ್ನೂ ಸದ್ಯ ಯುಎಇನಲ್ಲಿರುವ ಹಾರ್ದಿಕ್ ಪಾಂಡ್ಯ, ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್​ಗೆ ತಯಾರಿ ನಡೆಸ್ತಿದ್ದಾರೆ..

Source: newsfirstlive.com Source link