10 ಕೋಟಿ ವಂಚನೆ, 33 ವಾರಂಟ್ -ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ನಾಪತ್ತೆಯಾಗಿದ್ದವ ಅರೆಸ್ಟ್​

10 ಕೋಟಿ ವಂಚನೆ, 33 ವಾರಂಟ್ -ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ನಾಪತ್ತೆಯಾಗಿದ್ದವ ಅರೆಸ್ಟ್​

ದಾವಣಗೆರೆ: ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ಪಾವತಿಸದೇ ವಂಚಿಸಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಸಿದ್ದಾರೆ. ಹರಿಹರದ ‘ಪಯನಿಯರ್ ಪ್ರವೇಟ್ ಲಿಮಿಟೆಡ್’ನ ಪಾಲುದಾರನಾಗಿದ್ದ ನಂದಕುಮಾರ್ ಎಂಬಾತನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ ಕರೆ ತಂದಿದ್ದಾರೆ.

ಆರೋಪಿ ನಂದಕುಮಾರ್​ ರೈತರಿಂದ ಮೆಕ್ಕೆಜೋಳ ಖರೀದಿಸಿ ಬರೋಬ್ಬರಿ 10 ಕೋಟಿ 63 ಲಕ್ಷ ರೂಪಾಯಿಯನ್ನು ವಂಚಿಸಿ ಪರಾರಿಯಾಗಿದ್ದ ಎನ್ನಲಾಗಿದೆ. ಆರೋಪಿ ನಂದಕುಮಾರ್ 2008 ರಲ್ಲಿ ಹರಿಹರದ ದೋಸ್ತಾನ ಟ್ರೇಡರ್ಸ್ ಮಾಲೀಕ ಖಲೀಲ್ ದೋಸ್ತಾನ ಬಳಿ 1 ಕೋಟಿ ರೂಪಾಯಿ ಮೊತ್ತದ ಮೆಕ್ಕೆಜೋಳ ಖರೀದಿ ಮಾಡಿ, ಖಲೀಲ್ ಗೆ 1 ಕೋಟಿ ರೂಪಾಯಿಯ ಚೆಕ್ ನೀಡಿದ್ದನಂತೆ. ಆತ ನೀಡಿದ ಚೆಕ್​ ಚೆಕ್​ಬೌನ್ಸ್​ (ಅಮಾನ್ಯ) ಆಗಿದ್ದು, ಘಟನೆ ಸಂಬಂಧಿಸಿ ಆರೋಪಿ ನಂದಕುಮಾರ್ ವಿರುದ್ಧ ಹರಿಹರ ಜೆಎಂಎಫ್ ಸಿ ಕೋರ್ಟ್ ನಲ್ಲಿ ಖಲೀಲ್ ದೂರು ದಾಖಲಿಸಿದ್ದರು.

ಈ ವೇಳೆ ಹರಿಹರದ ಜೆಎಂಎಫ್​ಸಿ ನ್ಯಾಯಲಯ ನಂದಕುಮಾರ್​ಗೆ ಹಾಜರಾಗುವಂತೆ 33 ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ಆತನ ವಿರುದ್ಧ ಬಂಧನದ ವಾರೆಂಟ್​ ಜಾರಿ ಮಾಡಿತ್ತು. ನ್ಯಾಯಾಲಯದ ಆದೇಶದಂತೆ ನಂದಕುಮಾರನನ್ನ ಬಂಧಿಸಿರುವ ಪೊಲೀಸರು, ತಮಿಳುನಾಡಿನ ತಿರುಪುರದಿಂದ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.

ಇದನ್ನೂ ಓದಿ:  ಪ್ರತಿ ದಲಿತ ಕುಟುಂಬಕ್ಕೆ ₹10 ಲಕ್ಷ -‘ದಲಿತ ಬಂಧು’ ಯೋಜನೆಗೆ ಚಾಲನೆ ಕೊಟ್ಟ ತೆಲಂಗಾಣ ಸಿಎಂ ಕೆಸಿಆರ್​

ಇಲ್ಲಿನ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಿ ಮಾರಾಟ ಮಾಡುತಿದ್ದ ನಂದಕುಮಾರ್ ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗ, ರಾಣೆಬೆನ್ನೂರು, ಹಾವೇರಿಯಲ್ಲಿ ಮೆಕ್ಕೆಜೋಳ ಖರೀದಿಸಿ ದೋಖಾ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸ್​ ವಶದಲ್ಲಿರುವ ಆರೋಪಿ ನಂದಕುಮಾರ್​ನನ್ನ ಇದೇ ತಿಂಗಳು 22 ರಂದು ನ್ಯಾಯಲಯಕ್ಕೆ ಹಾಜರು ಪಡಿಸೋದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ..

Source: newsfirstlive.com Source link