ಚಿರಂಜೀವಿ ಭೇಟಿಯಾಗಿ ‘ನಾವೇ ಪುಣ್ಯವಂತರು ಅಣ್ಣಯ್ಯ’ ಎಂದ ಪ್ರಕಾಶ್​ ರಾಜ್

ಚಿರಂಜೀವಿ ಭೇಟಿಯಾಗಿ ‘ನಾವೇ ಪುಣ್ಯವಂತರು ಅಣ್ಣಯ್ಯ’ ಎಂದ ಪ್ರಕಾಶ್​ ರಾಜ್

ಕೆಲ ದಿನಗಳ ಹಿಂದೆ ತಮಿಳು ನಟ ಧನುಷ್​ರ ಹೊಸ ಸಿನಿಮಾ ಡಿ44 ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಫೈಟಿಂಗ್​ ಸಿಕ್ವೇನ್ಸ್​ ವೇಳೆ ಬಾಹುಭಾಷಾ ನಟ ಪ್ರಕಾಶ್​ ರಾಜ್​ ಎಡಗೈಗೆ ಗಂಭೀರ ಗಾಯವಾಗಿತ್ತು. ಬಳಿಕ ಪ್ರಕಾಶ್​ ರಾಜ್​ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಚಿಕಿತ್ಸೆ ಯಶಸ್ವಿಗೊಂಡ ಬೆನ್ನಲ್ಲೇ ಪ್ರಕಾಶ್​ ರಾಜ್​ ದಿ ಡೆವಿಲ್​ ಇಸ್​ ಬ್ಯಾಕ್​ ಅಂತಾ ಅಸ್ಪತ್ರೆಯಲ್ಲೆ ಒಂದು ಫೋಟೋ ಕ್ಲಿಕಿಸಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಸುದ್ದಿಯಾಗಿದ್ರು.

ಇನ್ನು ಪ್ರಕಾಶ್​ ರಾಜ್​ರ ಎಡ ಭುಜದ ಮೇಲೆ ಪ್ಲಾಸ್ಟರ್‌ ಹಾಕಲಾಗಿದ್ರು ಸಹ ಪ್ರಕಾಶ್​ ರಾಜ್​ ಇದೀಗ ಮತ್ತೆ ಜಿಮ್​ನಲ್ಲಿ ವರ್ಕ್​ಔಟ್​ ಮಾಡೊದ್ರರಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಟಾಲಿವುಡ್​ ನಟ ಚೀರಂಜಿವಿ ಕೂಡ ಅದೇ ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಿದ್ದು, ನಟ ಪ್ರಕಾಶ್​ ರಾಜ್​ ಚೀರಂಜಿವಿ ಜೊತೆ ಫೋಟೊ ಒಂದನ್ನ ಕ್ಲಿಕಿಸಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಇಂದು ಬೆಳ್​ಬೆಳಗ್ಗೆನೇ ಜಿಮ್​ನಲ್ಲಿ ಬಾಸ್​ನ ಭೇಟಿಯಾಗಿದ್ದೇನೆ. ಚಲನಚಿತ್ರ ಭ್ರಾತೃತ್ವಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಉಪಕ್ರಮ ತೆಗೆದುಕೊಂಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ನೀವು ಸದಾ ಸ್ಫೂರ್ತಿದಾಯಕ ಅಣ್ಣಯ್ಯ. ನಿಮ್ಮನು ಹೊಂದಿರುವ ನಾವೇ ಪುಣ್ಯವಂತರು ಅಂತಾ ಪ್ರಕಾಶ್ ರಾಜ್​ ಬರೆದುಕೊಂಡಿದ್ದಾರೆ”.

Source: newsfirstlive.com Source link