ಮೈಸೂರಲ್ಲಿ ಮತ್ತೆ ಜಿದ್ದಾಜಿದ್ದಿಗೆ ಅಖಾಡ ರೆಡಿ; ಪಾಲಿಕೆಯ ಮೇಯರ್​ ಚುನಾವಣೆಗೆ ಡೇಟ್​ ಫಿಕ್ಸ್

ಮೈಸೂರಲ್ಲಿ ಮತ್ತೆ ಜಿದ್ದಾಜಿದ್ದಿಗೆ ಅಖಾಡ ರೆಡಿ; ಪಾಲಿಕೆಯ ಮೇಯರ್​ ಚುನಾವಣೆಗೆ ಡೇಟ್​ ಫಿಕ್ಸ್

ಮೈಸೂರು: ಪಾಲಿಕೆ ಜಂಗೀ ಕುಸ್ತಿಗೆ ಡೇಟ್​ ಫಿಕ್ಸ್​ ಆಗಿದೆ. ಆಗಸ್ಟ್ 25ಕ್ಕೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ತಿಳಿಸಿದ್ದಾರೆ.

ಮಾಜಿ ಮೇಯರ್ ರುಕ್ಮಿಣಿ ಮಾದೇಗೌದ ಸದಸ್ಯತ್ವ ರದ್ದಾದ ಹಿನ್ನೆಲೆ ತೆರವಾಗಿದ್ದ ಪಾಲಿಕೆ ಮೇಯರ್ ಹುದ್ದೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಆಗಸ್ಟ್​ ತಿಂಗಳಲ್ಲಿ ಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅಧಿಕೃತವಾಗಿ ಪ್ರಾದೇಶಿಕ ಆಯುಕ್ತ ಡಾ.ಪ್ರಕಾಶ್ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ:  ಪ್ರತಿ ದಲಿತ ಕುಟುಂಬಕ್ಕೆ ₹10 ಲಕ್ಷ -‘ದಲಿತ ಬಂಧು’ ಯೋಜನೆಗೆ ಚಾಲನೆ ಕೊಟ್ಟ ತೆಲಂಗಾಣ ಸಿಎಂ ಕೆಸಿಆರ್​

ಕಾಂಗ್ರೆಸ್ ಜೊತೆಗಿನ ಮೈತ್ರಿಯೊಂದಿಗೆ ಮೇಯರ್ ಗಾದಿ ಏರಿದ್ದ ಜೆಡಿಎಸ್, ಬಿಜೆಪಿಗೆ ಕೊನೆ ಗಳಿಗೆಯಲ್ಲಿ ಮೇಯರ್ ಸ್ಥಾನ ಕೈತಪ್ಪುವಂತೆ ಮಾಡಿತ್ತು. ಈ ವೇಳೆ ಯಡಿಯೂರಪ್ಪ ಸಂಬಂಧಿ ಸುನಂದ ಪಾಲನೇತ್ರರನ್ನು ಮೇಯರ್ ಮಾಡಲು ನಾನಾ ತಂತ್ರ ರೂಪಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಿತ್ತು.

ಇನ್ನು ಈ ಹಿಂದೆಯೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ನಡೆಯಬೇಕಿದ್ದ ಮೇಯರ್‌ ಚುನಾವಣೆಯನ್ನು, ಕೋವಿಡ್​ ಕಾರಣಕ್ಕಾಗಿ ನ್ಯಾಯಾಲಯದ ತಡೆಯಾಜ್ಞೆಯಂತೆ ಮುಂದೂಡಲಾಗಿತ್ತು.

Source: newsfirstlive.com Source link