ದೇಶದಲ್ಲಿ ಒಂದೇ ದಿನ 88.13 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್

ದೇಶದಲ್ಲಿ ಒಂದೇ ದಿನ 88.13 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನೇಷನ್

ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕಾ ಅಭಿಯಾನವನ್ನು ತ್ವರಿತಗೊಳಿಸಿದ್ದು, ಸೋಮವಾರ ಒಂದೇ ದಿನ 88.16 ಲಕ್ಷ ಡೋಸ್ (8.82 ಮಿಲಿಯನ್​​) ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಜನವರಿ 16ರ ಬಳಿಕ ಆರಂಭವಾದ ಲಸಿಕಾ ಅಭಿಯಾನದಲ್ಲಿ ಮೊದಲ ಬಾರಿಗೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ 88.16 ಲಕ್ಷ ಡೋಸ್​ ಲಸಿಕೆ ನೀಡಲಾಗಿದೆ. ಇದರೊಂದಿಗೆ ಸೋಮವಾರದ ವೇಳೆಗೆ 55 ಕೋಟಿ ಡೋಸ್​​ ಲಸಿಕೆ ನೀಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಸಂಖ್ಯೆ 55,47,30,609 ಡೋಸ್​​ಗಳನ್ನು ನೀಡಲಾಗಿದೆ.

ಜೂನ್​ 21 ರಂದು 8.6 ಮಿಲಿಯನ್ ಡೋಸ್​​ಗಳನ್ನು ಒಂದೇ ದಿನ ನೀಡಿದ್ದು ಈ ಹಿಂದಿನ ದಾಖಲೆಯಾಗಿತ್ತು. ಸರ್ಕಾರ ಡೇಟಾ ಮಾಹಿತಿಯ ಅನ್ವಯ, ಸುಮಾರು 8.1 ಕೋಟಿ ಆರೋಗ್ಯ ಕಾರ್ಯಕರ್ತರು ತಮ್ಮ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 1.22 ಕೋಟಿ (12.2 ಮಿಲಿಯನ್) ಫ್ರಂಟ್​ ಲೈನ್ ವರ್ಕರ್ಸ್​​ಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಉಳಿದಂತೆ 18 ರಿಂದ 45 ವರ್ಷ ವಯಸ್ಸಿನೊಳಗಿನ 1.60 ಕೋಟಿ (16 ಮಿಲಿಯನ್) ಜನರು ತಮ್ಮ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು 45 ರಿಂದ 60 ವರ್ಷ ಮೇಲ್ಪಟ್ಟ 8.60 ಕೋಟಿ (86 ಮಿಲಿಯನ್) ಜನ ತಮ್ಮ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

Source: newsfirstlive.com Source link