ಒಬ್ಬರನ್ನ ಕೆಣಕಿದ್ರೆ 11 ಮಂದಿಯೂ ತಿರುಗಿ ಬೀಳುತ್ತೇವೆ -ಕೆಎಲ್​ ರಾಹುಲ್​​​

ಒಬ್ಬರನ್ನ ಕೆಣಕಿದ್ರೆ 11 ಮಂದಿಯೂ ತಿರುಗಿ ಬೀಳುತ್ತೇವೆ -ಕೆಎಲ್​ ರಾಹುಲ್​​​

ಐತಿಹಾಸಿಕ ಲಾರ್ಡ್ಸ್​​​​ ಮೈದಾನದಲ್ಲಿ ಟೀಮ್​ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಕ್ಷಣಕ್ಷಣಕ್ಕೂ ರೋಚಕತೆ ಹುಟ್ಟಿಸಿದ್ದ 5ನೇ ಮತ್ತು ಅಂತಿಮ ದಿನದಾಟದಲ್ಲಿ ಭಾರತ, ಆಂಗ್ಲರ ಎದುರು 151 ರನ್​​ಗಳ ಜಯ ಸಾಧಿಸಿದೆ. ಆದರೆ ಇಷ್ಟರ ಮಟ್ಟಿಗೆ ರೋಚಕತೆ ಹುಟ್ಟಿಸಲು ಈ ಪಂದ್ಯದಲ್ಲಿ ಆಟಗಾರರ ನಡುವೆ ನಡೆದ ಘರ್ಷಣೆಗಳೇ ಸಾಕ್ಷಿ.

ವಿರಾಟ್​ ಕೊಹ್ಲಿ-ಜೇಮ್ಸ್​ ಆ್ಯಂಡರ್​ಸನ್​, ಜಸ್​ಪ್ರಿತ್​ ಬೂಮ್ರಾ- ಜೇಮ್ಸ್​ ಆ್ಯಂಡರ್​ಸನ್​, ಬೂಮ್ರಾ- ಮಾರ್ಕ್​​ವುಡ್​, ಸಿರಾಜ್​ – ರಾಬಿನ್​​ಸನ್​ ಮತ್ತು ಮೊಹಮ್ಮದ್​ ಶಮಿ – ಜೋಸ್​ ಬಟ್ಲರ್​ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಭಾರತದ ಬ್ಯಾಟಿಂಗ್ ವೇಳೆ ಕೆಣಕುತ್ತಿದ್ದ ಆಂಗ್ಲರಿಗೆ ವಿರಾಟ್ ಸೇನೆ ತಿರುಗೇಟು ನೀಡ್ತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಲ್.ರಾಹುಲ್, ನೀವು ನಮ್ಮ ತಂಡದ ಒಬ್ಬ ಆಟಗಾರರನ್ನು ಕೆಣಕಿದರೆ 11 ಮಂದಿಯೂ ತಿರುಗಿ ಬೀಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಎರಡು ಬಲಿಷ್ಠ ತಂಡಗಳು ಆಡುವಾಗ ಶ್ರೇಷ್ಠ ಮಟ್ಟದ ಕೌಶಲ ಮತ್ತು ಸ್ವಲ್ಪ ಇಂತಹ ಮಾತುಗಳು ಇದ್ದೇ ಇರುತ್ತವೆ. ಆದರೆ ನಾವು ಇಂತಹ ಮಾತುಗಳಿಗೆ ತಲೆ ಕಡಿಸಿಕೊಳ್ಳುವುದಿಲ್ಲ. ಒಂದು ವೇಳೆ ನಮ್ಮ ಒಬ್ಬರನ್ನು ಕೆಣಕಿದರೂ 11 ಮಂದಿಯೂ ತಿರುಗಿ ಬೀಳುತ್ತೇವೆ ಎಂದು ತಿಳಿಸಿದ್ದಾರೆ. ಹಾಗೆಯೇ ಮೂರನೇ ದಿನದಾಟದಂದು ಇಂಗ್ಲೆಂಡ್​ ಅಭಿಮಾನಿಗಳು ಬಿಯರ್​​ – ಶಾಂಪೇನ್​​ ಕಾರ್ಕ್​​​ಗಳನ್ನ ಎಸೆದು, ಅನುಚಿತ ವರ್ತನೆ ತೋರಿದ ಘಟನೆ ಕೂಡ ನಡೆದಿತ್ತು.

ಇದನ್ನೂ ಓದಿ: ಶಾಂಪೈನ್​​ ಮುಚ್ಚಳ ಎಸೆದು ಇಂಗ್ಲೆಂಡ್​ ಫ್ಯಾನ್ಸ್ ಅನುಚಿತ ವರ್ತನೆ: ತಿರುಗಿಸಿ ಹೊಡಿ ಎಂದ ಕೊಹ್ಲಿ 

ಇದನ್ನೂ ಓದಿ: 631 ದಿನ, 49 ಇನ್ನಿಂಗ್ಸ್, ಸಿಡಿಯಲಿಲ್ಲ ಶತಕ..! ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿ ಫ್ಯಾನ್ ಕ್ಲಬ್..!

blank

Source: newsfirstlive.com Source link