ಆಫ್ಘಾನ್​ ವಿದ್ಯಾರ್ಥಿಗಳ್ಯಾರೂ ತಾಯ್ನಾಡಿಗೆ ಹೋಗ್ತಿಲ್ಲ, ಅವ್ರ ಜೊತೆ ವಿವಿ ಇದೆ -ಮೈಸೂರು ವಿವಿ

ಆಫ್ಘಾನ್​ ವಿದ್ಯಾರ್ಥಿಗಳ್ಯಾರೂ ತಾಯ್ನಾಡಿಗೆ ಹೋಗ್ತಿಲ್ಲ, ಅವ್ರ ಜೊತೆ ವಿವಿ ಇದೆ -ಮೈಸೂರು ವಿವಿ

ಮೈಸೂರು: ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಆಫ್ಘಾನ್ ವಿದ್ಯಾರ್ಥಿಗಳು ತಾಯ್ನಾಡಿಗೆ ಹೋಗುತ್ತಿಲ್ಲ. ಆಫ್ಘಾನ್​ ವಿದ್ಯಾರ್ಥಿಗಳು ಇಲ್ಲೆ ಇದ್ದು, ಅವರಿಗೆ ಯಾವುದೇ ಆತಂಕವಿಲ್ಲ ಅಂತಾ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಕುರಿತಂತೆ ಮೈಸೂರು ವಿವಿಯಲ್ಲಿ ಓದುತ್ತಿರುವ ಅಫ್ಘಾನಿಸ್ತಾನದ 92 ವಿದ್ಯಾರ್ಥಿಗಳಿಗೆ ವಿವಿ ಅಭಯ ನೀಡಿದೆ. ಸದ್ಯ ವಿದ್ಯಾರ್ಥಿಗಳಿಗೆ ಯಾವುದೇ ಆತಂಕವಿಲ್ಲ, ಮತ್ತು ಯಾವ ವಿದ್ಯಾರ್ಥಿಗಳು ತಾಯ್ನಾಡಿಗೆ ಹೋಗುತ್ತಿಲ್ಲ ಎಂದು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  ಮಕ್ಕಳ ಪಾರ್ಕ್​​ನಲ್ಲಿ ಮಂಗಾಟ -ಕಾಬೂಲ್ ವಶಕ್ಕೆ ಪಡೆದ ಬೆನ್ನಲ್ಲೇ ಮಾಡ್ತಿರೋದೇನು?

ಎಲ್ಲರೂ ನಿರ್ಭೀತಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದು, ಸೆಪ್ಟೆಂಬರ್ 20 ರಿಂದ ಪರೀಕ್ಷೆಗಳು ಆರಂಭವಾಗಲಿದೆ. ಅಕ್ಟೋಬರ್ ಮೊದಲ ವಾರದವರೆಗೂ ಪರೀಕ್ಷೆ ನಡೆಯುತ್ತದೆ. ಹೀಗಾಗಿ ಯಾವುದೇ ವಿದ್ಯಾರ್ಥಿಗಳು ತಾಯ್ನಾಡಿಗೆ ಹೋಗುತ್ತಿಲ್ಲ. ಆಫ್ಘಾನ್​ನಿಂದ ಯಾವ ವಿಧ್ಯಾರ್ಥಿಗಳು ಸದ್ಯಕ್ಕೆ ಬರುತ್ತಿಲ್ಲ. ಸದ್ಯ ಆಫ್ಘಾನ್ ವಿದ್ಯಾರ್ಥಿಗಳಿಂದ ನಮಗೆ ಯಾವುದೇ ಬೇಡಿಕೆ ಬಂದಿಲ್ಲ. ಮುಂದೆ ಯಾವುದೇ ಬೇಡಿಕೆ ಬಂದರೂ ಮೈಸೂರು ವಿವಿ ಸ್ಪಂದಿಸುತ್ತದೆ. ಮತ್ತು ಆ ವಿದ್ಯಾರ್ಥಿಗಳೊಂದಿಗೆ ವಿವಿ ಇರುತ್ತದೆ ಎಂದಿದ್ದಾರೆ.

ಆಫ್ಘಾನ್ ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಆದರೂ ಇಂಟರ್ ನ್ಯಾಷನಲ್ ಡೈರೆಕ್ಟರ್ ಬಗೆಹರಿಸುತ್ತಾರೆ. ಅವರಿಂದ ಸಮಸ್ಯೆ ಬಗೆಹರಿಯದ ಸಮಯದಲ್ಲಿ ನಾವು ಮುಂದೆ ಬಂದು ಸಮಸ್ಯೆ ಬಗೆ ಹರಿಸುತ್ತೇವೆ. ಸರ್ಕಾರ ವಿದ್ಯಾರ್ಥಿಗಳ ವೀಸಾ ಅವಧಿ ವಿಸ್ತರಿಸಿ, ವಿದ್ಯಾರ್ಥಿಗಳು ಇಲ್ಲಿಯೆ ಇರಲು ಇಚ್ಛಿಸಿದರೆ ಬೇಕಾದ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

Source: newsfirstlive.com Source link