‘ಇಂಗ್ಲೆಂಡ್​ಗೆ ನರಕದಂತೆ ಭಾಸವಾಗಬೇಕು’ -ಟೀಂ ಇಂಡಿಯಾ ಅಗ್ರೆಸ್ಸಿವ್ ಆಟಕ್ಕೆ ಕಾರಣ ಕೊಹ್ಲಿಯ ಈ ಸ್ಪೀಚ್​?

‘ಇಂಗ್ಲೆಂಡ್​ಗೆ ನರಕದಂತೆ ಭಾಸವಾಗಬೇಕು’ -ಟೀಂ ಇಂಡಿಯಾ ಅಗ್ರೆಸ್ಸಿವ್ ಆಟಕ್ಕೆ ಕಾರಣ ಕೊಹ್ಲಿಯ ಈ ಸ್ಪೀಚ್​?

ಲಾರ್ಡ್ಸ್​ ಅಂಗಳದಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ ಟೀಮ್​ ಇಂಡಿಯಾ ದಿಗ್ವಿಜಯ ಸಾಧಿಸಿದೆ. ಆ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಭಾರತದ ಆಟಗಾರರ ಅಗ್ರೆಸಿವ್​ ಆಟಕ್ಕೆ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ನೀಡಿದ ಸ್ಪೀಚ್ ಮತ್ತು ಪಂದ್ಯದಲ್ಲಿ ನಡೆದ ಘರ್ಷಣೆಗಳು ಕಾರಣ ಎನ್ನಲಾಗಿದೆ. 181 ರನ್​ಗೆ 6 ವಿಕೆಟ್​ ಕಳೆದುಕೊಂಡಿದ್ದ ಭಾರತ, 5ನೇ ದಿನದಾಟ ಆರಂಭಿಸಿತು.

ಆರಂಭದಲ್ಲೇ ಪಂತ್​ ಮತ್ತು ಇಶಾಂತ್​ ವಿಕೆಟ್​ ಪತನಗೊಂಡು ಮತ್ತೆ ಆಘಾತ ಎದುರಾಯ್ತು. ಆದರೆ 9ನೇ ವಿಕೆಟ್​​ಗೆ ಒಂದಾದ ಮೊಹಮ್ಮದ್​ ಶಮಿ – ಜಸ್​ಪ್ರಿತ್​ ಬೂಮ್ರಾ ಜೋಡಿ, ಬ್ಯಾಟಿಂಗ್​ ಕಮಾಲ್​ ಮಾಡಿದ್ರು. ಈ ಜೋಡಿ 120 ಎಸೆತಗಳಲ್ಲಿ 89 ರನ್​ ಜೊತೆಯಾಟವಾಡಿತು. ಇವರಿನ್ನೂ ಕ್ರೀಸ್​​ನಲ್ಲಿದ್ದಾಗಲೇ ಡಿಕ್ಲೇರ್​ ಘೋಷಿಸಿದ ವಿರಾಟ್​, ಎದುರಾಳಿ ತಂಡಕ್ಕೆ 272ರನ್​ಗಳ ಟಾರ್ಗೆಟ್​ ನೀಡಿತು.

ಆದರೆ ಚೇಸಿಂಗ್​ಗೂ ಮುನ್ನ 60 ಓವರ್‌ಗಳಲ್ಲಿ ಅವರು ಹೆಚ್ಚು ಒತ್ತಡಕ್ಕೆ ಒಳಗಾಗುವಂತೆ ಬೌಲ್​ ಮಾಡಬೇಕು ಎಂದು ಬೌಲರ್​ಗಳಿಗೆ ಕೊಹ್ಲಿ ಸೂಚಿಸಿದ್ರಂತೆ. ಪಂದ್ಯದ ವೇಳೆ ಏನೆಲ್ಲಾ ಮಾಡಬೇಕು ಅನ್ನೋದನ್ನ ಇಂಗ್ಲೆಂಡ್​ ಬ್ಯಾಟಿಂಗ್​ ಮುನ್ನ ಪ್ರೇರಣಾ ಭಾಷಣ ಮಾಡಿದ್ರಂತೆ. ಕೊಹ್ಲಿ ಭಾಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇಂಗ್ಲೆಂಡ್ ಆಟಗಾರರಿಗೆ ನರಕದಂತೆ ಭಾಸವಾಗಬೇಕು ಎಂದು ಕೊಹ್ಲಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಇಂಗ್ಲೆಂಡ್​ ಆಟಗಾರರ ನಡುವಿನ ಘರ್ಷಣೆಗಳು ನಮ್ಮ ಪ್ರೋತ್ಸಾಹ ಅಗ್ರೆಸಿವ್ ಆಟಕ್ಕೆ ಪ್ರಮುಖ ಕಾರಣವಾಯ್ತು. ಜೊತೆಗೆ ನಮ್ಮಲ್ಲಿನ ಸ್ಫೂರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿತು ಎಂದು ಟೀಮ್​ ಇಂಡಿಯಾ ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿರಾಟ್​ ಕೊಹ್ಲಿ-ಜೇಮ್ಸ್​ ಆ್ಯಂಡರ್​ಸನ್​, ಜಸ್​ಪ್ರಿತ್​ ಬೂಮ್ರಾ- ಜೇಮ್ಸ್​ ಆ್ಯಂಡರ್​ಸನ್​ ಹೀಗೆ ಆಟಗಾರರ ಮಧ್ಯೆ ಮಾತಿನ ವಿನಿಮಯ ನಡೆದಿತ್ತು.

Source: newsfirstlive.com Source link