ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನ ಕರೆತರಲು ಫೀಲ್ಡ್​ಗೆ ಇಳಿದ ಅಜಿತ್ ದೋವಲ್ 

ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನ ಕರೆತರಲು ಫೀಲ್ಡ್​ಗೆ ಇಳಿದ ಅಜಿತ್ ದೋವಲ್ 

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆಯಿಂದ ಅಲ್ಲಿರುವ ಭಾರತೀಯರ ರಕ್ಷಣೆ ದೊಡ್ಡ ಸವಾಲಾ​​ಗಿ ಪರಿಣಮಿಸಿದೆ. ಈಗಾಗಲೇ ಅಮೆರಿಕ ಸೇನೆಯ ಸಹಕಾರದಿಂದ 2 ಬ್ಯಾಚ್​​ನಲ್ಲಿ ಭಾರತೀಯರನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಜೊತೆಗೆ ಇನ್ನುಳಿದವರನ್ನ ವಾಪಸ್ ಕರೆದುಕೊಂಡು ಬರುವ ಎಲ್ಲಾ ತಯಾರಿಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕ ಜೊತೆ ಮಾತುಕತೆ ನಡೆಸಿದ್ದಾರೆ.

blank

ಇದನ್ನೂ ಓದಿ: ಕಾಬೂಲ್​ಗೆ ಬಂದ 1 ಸಾವಿರ ​​ಸೈನಿಕರಿಂದ ಇಂಗ್ಲೆಂಡ್​​ ನಾಗರಿಕರ ರಕ್ಷಣೆ

ಸದ್ಯ ಕಾಬೂಲ್​​ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಮೆರಿಕ ಸೇನೆಯ ಹಿಡಿತದಲ್ಲಿದೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನ ಅಮೆರಿಕ ನಿಯೋಜನೆ ಮಾಡಿಕೊಂಡಿದೆ. ಹೀಗಾಗಿ ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಬೇಕು ಅಂದ್ರೆ US ಮಿಲಿಟರಿ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಅಮೆರಿಕಾ ಅಧಿಕಾರಿಗಳ ಜೊತೆ ಅಜಿತ್ ದೋವಲ್ ಮಾತುಕತೆ ನಡೆಸಿದ್ದಾರೆ.

blank

ಇದನ್ನೂ ಓದಿ: ತಾಲಿಬಾನಿಗಳು ಅಂದ್ರೆ ಏನು?; ತಾಲಿಬಾನ್​​ ಮುಖ್ಯಸ್ಥ ಅಬ್ದುಲ್ ಗನಿ ಯಾರು..?

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲ್ಲಿವನ್ ಜೊತೆ ಅಜಿತ್ ದೋವಲ್ ಮಾತುಕತೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಸದ್ಯದ ಪರಿಸ್ಥಿತಿ ಹಾಗೂ ಅಲ್ಲಿರುವ ಭಾರತೀಯರನ್ನ ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಅನ್ನೋದ್ರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

 

ನಿನ್ನೆ ಅಫ್ಘಾನಿಸ್ತಾನದಿಂದ ಒಂದು ಬ್ಯಾಚ್​ ಭಾರತಕ್ಕೆ ಬಂದಿತ್ತು. ಇಂದು ಮಧ್ಯಾಹ್ನದ ವೇಳೆಗೆ ಎರಡನೇ ಬ್ಯಾಚ್​​ ಭಾರತಕ್ಕೆ ಬಂದಿಳಿದಿದೆ. ಎರಡನೇ ಬ್ಯಾಚ್​​ನಲ್ಲಿ ಅಧಿಕಾರಿಗಳು, ಪತ್ರಕರ್ತರು ಸೇರಿ ಒಟ್ಟು 120 ಮಂದಿ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ.

ಇದನ್ನೂ ಓದಿ: ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

Source: newsfirstlive.com Source link