ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಕೂಲೆಸ್ಟ್ ಡ್ಯಾಡಿ ಎಂದೇ ಹೇಳಬಹುದು. ಸದ್ಯ ತಮ್ಮ ಮಗಳು ರಿಯಾ ಮದುವೆ ಸಂಭ್ರಮದಲ್ಲಿರುವ ಅನಿಲ್ ಕಪೂರ್ ಆರತಕ್ಷತೆಯ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದ ಹರಿದಾಡುತ್ತಿದೆ.

ಆರಕ್ಷತೆಯ ಸಮಾರಂಭಕ್ಕೆ ನೃತ್ಯ ನಿರ್ದೇಶಕಿ ಫರಾ ಖಾನ್ ಹಾಜರಾಗಿದ್ದು. ಸದ್ಯ ಈ ವೀಡಿಯೋವನ್ನು ಫರಾ ಖಾನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನಿಲ್ ಕಪೂರ್ ಹಾಗೂ ರಿಯಾ ಕಪೂರ್, ಸೋನಂ ಕಪೂರ್ ಅವರ ‘ಅಭಿ ತೋ ಪಾರ್ಟಿ ಸುರು ಹುಯಿ ಹೈ” ಹಾಡಿಗೆ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇದನ್ನೂ ಓದಿ: BB ಮೀನಿ ಸೀಸನ್ ನಿರೂಪಣೆ ಮಾಡಲಿದ್ದಾರೆ ಕಿಚ್ಚ

ವೀಡಿಯೋ ಜೊತೆಗೆ ಫರಾ ಖಾನ್ ಈ ಮನುಷ್ಯನನ್ನು ಪ್ರೀತಿಸುತ್ತೇನೆ. ಬೆಸ್ಟ್ ತಂದೆ ಅನಿಲ್ ಕಪೂರ್ ಹಾಗೂ ಮಗಳು ರಿಯಾ ಕಪೂರ್ ನೃತ್ಯ. ಇಂತಹ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

blank

ರಿಯಾ ಕಪೂರ್ ಹಾಗೂ ಕರಣ್ ಬುಲಾನಿ ಆರತಕ್ಷತೆ ಆಗಸ್ಟ್ 16ರಂದು ನಡೆದಿದ್ದು, ಸೋನಮ್ ಕಪೂರ್, ಆನಂದ್ ಅಹುಜಾ, ಅರ್ಜುನ್ ಕಪೂರ್, ಖುಷಿ ಕಪೂರ್, ಜಾನ್ವಿ ಕಪೂರ್, ಫರಾ ಖಾನ್, ಅಂಶುಲಾ ಕಪೂರ್, ಶನಾಯಾ ಕಪೂರ್, ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಮತ್ತಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ನಟಿ ಚೈತ್ರಾ ರೈ

ಆಗಸ್ಟ್ 14 ರಂದು ಅನಿಲ್ ಕಪೂರ್ ಅವರ ಜುಹು ನಿವಾಸದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ರಿಯಾ ಮತ್ತು ಕರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹ ಮೊದಲ ಫೋಟೋವನ್ನು ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

 

View this post on Instagram

 

A post shared by Rhea Kapoor (@rheakapoor)

Source: publictv.in Source link