ಹೈಟಿಯಲ್ಲಿ ಭಾರೀ ಭೂಕಂಪ; 1,400 ಕ್ಕೆ ಏರಿದ ಸಾವಿನ ಸಂಖ್ಯೆ

ಹೈಟಿಯಲ್ಲಿ ಭಾರೀ ಭೂಕಂಪ; 1,400 ಕ್ಕೆ ಏರಿದ ಸಾವಿನ ಸಂಖ್ಯೆ

ಮೂರು ದಿನಗಳ ಹಿಂದೆ ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. 7.2 ತೀವ್ರತೆಯ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ಕುಸಿದಿದ್ದವು. ರಕ್ಷಣಾ ಕಾರ್ಯಾಚರಣೆ ಮೂರು ದಿನಗಳಿಂದಲೂ ನಿರಂತರವಾಗಿ ಸಾಗಿದ್ದು ಈವರೆಗೆ 1,400 ಮಂದಿ ಭೂಕಂಪದಿಂದಾಗಿ ಸಾವನ್ನಪ್ಪಿದಂತಾಗಿದೆ.

ಇದನ್ನೂ ಓದಿ: ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರೀ ಭೂಕಂಪ.. ನೂರಾರು ಕಟ್ಟಡಗಳು ಕುಸಿತ

ಇನ್ನು ಭೂಕಂಪದಿಂದಾಗಿ 6 ಸಾವಿರ ಮಂದಿ ಗಾಯಗೊಂಡಿದ್ದು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಂಕಷ್ಟ ಪಡುವಂತಾಗಿದೆ ಎಂದು ಹೇಳಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಹೈಟಿಯಲ್ಲಿ ಒಟ್ಟು 3 ಸಾವಿರ ಮನೆಗಳು ಹಾನಿಗೀಡಾಗಿವೆ ಎಂದು ಅಂದಾಜಿಸಲಾಗಿದೆ.

blank

ಘಟನೆಯ ಹಿನ್ನೆಲೆ ಇಡೀ ದೇಶದಲ್ಲಿ ಮೂರು ದಿನಗಳ ಕಾಲ ಸೂತಕ ಘೋಷಿಸಲಾಗಿದೆ. ಇಲ್ಲಿಯ ಮನೆಗಳನ್ನು ವೇಗದ ಗಾಳಿಗೆ ಹಾನಿಯಾಗದಂತೆ ನಿರ್ಮಿಸಲಾಗಿತ್ತು. ಆದರೆ ಭೂಕಂಪ ಎದುರಿಸುವ ಸಾಮರ್ಥ್ಯ ಕಟ್ಟಡಗಳಿಗೆ ಇಲ್ಲವಾದ್ದರಿಂದ ಹೆಚ್ಚಿನ ಮನೆಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ.

Source: newsfirstlive.com Source link