ಹೊಸದಾಗಿ ಮತ್ತೆ 22 ತಾಲೂಕುಗಳು ಪ್ರವಾಹ ಪೀಡಿತ -ರಾಜ್ಯ ಸರ್ಕಾರ ಘೋಷಣೆ

ಹೊಸದಾಗಿ ಮತ್ತೆ 22 ತಾಲೂಕುಗಳು ಪ್ರವಾಹ ಪೀಡಿತ -ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು: ಹೆಚ್ಚುವರಿಯಾಗಿ ರಾಜ್ಯದ 22 ತಾಲೂಕುಗಳನ್ನ ಪ್ರವಾಹ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್, ​ಈ ಹಿಂದೆ ರಾಜ್ಯದ 13 ಜಿಲ್ಲೆಗಳಿಂದ 61 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಆದರೆ ರಾಜ್ಯದ ಇನ್ನೂ ಹಲವಾರು ತಾಲೂಕುಗಳು ಇತ್ತೀಚೆಗೆ ಸುರಿದ ಮಳೆಗೆ ಪ್ರವಾಹ ಪೀಡಿತವಾಗಿದೆ. ಇದೀಗ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಅತಿವೃಷ್ಠಿ/ಪ್ರವಾಹ ಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರತಿ ದಲಿತ ಕುಟುಂಬಕ್ಕೆ ₹10 ಲಕ್ಷ -‘ದಲಿತ ಬಂಧು’ ಯೋಜನೆಗೆ ಚಾಲನೆ ಕೊಟ್ಟ ತೆಲಂಗಾಣ ಸಿಎಂ ಕೆಸಿಆರ್​

ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿಮ ಬಬಲೇಶ್ವರ, ನಿಡಗುಂದಿ, ಕೋಲಾರ, ಮುದ್ದೆಬಿಹಾಳ, ಹರಪ್ಪನಹಳ್ಳಿ, ಹೊಸ ನಗರ, ಮೂಡಿಗೆರೆ, ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ.

blank

Source: newsfirstlive.com Source link