ಮಲಯಾಳಂ ಮಾತ್ನಾಡೋ ತಾಲಿಬಾನ್​​​ ಉಗ್ರರ ವಿಡಿಯೋ ವೈರಲ್; ಮಾಹಿತಿ ನೀಡಿದ ಶಶಿ ತರೂರ್

ಮಲಯಾಳಂ ಮಾತ್ನಾಡೋ ತಾಲಿಬಾನ್​​​ ಉಗ್ರರ ವಿಡಿಯೋ ವೈರಲ್; ಮಾಹಿತಿ ನೀಡಿದ ಶಶಿ ತರೂರ್

ನವದೆಹಲಿ: ತಾಲಿಬಾನ್ ಉಗ್ರರಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಸಂಸದ ಶಶಿ ತರೂರ್​ ಅವರು ಟ್ವಿಟರ್​ನಲ್ಲಿ ವಿಡಿಯೋ ಒಂದನ್ನ ಕಮೆಂಟ್​ ಮಾಡಿ ರಿಟ್ವೀಟ್​​ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ವಿಕ್ಟರಿಯನ್ನ ಸೆಲೆಬ್ರೇಟ್ ಮಾಡ್ತಿರೋದಾಗಿದೆ. ಗನ್ ಹಿಡಿದು ಸೆಲೆಬ್ರೇಟ್ ಮಾಡ್ತಿರುವ ಇಬ್ಬರು ಉಗ್ರರು, ಮಲಿಯಾಳಂ ಭಾಷೆ ಮಾತನಾಡ್ತಿರೋದು ಕಂಡು ಬಂದಿದೆ.

‘ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್‌ಗಳಿರುವಂತೆ ತೋರುತ್ತದೆ. ಒಬ್ಬ 8 ಸೆಕೆಂಡ್‌ಗಳ ಕಾಲ ಸಂಸಾರಿಕೆಟ್ಟೆ ಎಂದು ಹೇಳುತ್ತಾನೆ ಮತ್ತು ಇನ್ನೊಬ್ಬ ಅವನನ್ನು ಅರ್ಥಮಾಡಿಕೊಳ್ತಾನೆ‘ ಎಂದು ಶಶಿತರೂರ್ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಶಶಿತರೂರ್​ ಅವರು ಶೇರ್ ಮಾಡಿರುವ ಟ್ವಿಟರ್ ಆಗಸ್ಟ್​ 15 ರಂದು ಪೋಸ್ಟ್ ಆಗಿದೆ. ಬಹುಶಃ ತಾಲಿಬಾನಿಗಳು ಕಾಬೂಲ್​ಗೆ ರೀಚ್ ಆದ ಸಂದರ್ಭದಲ್ಲಿ ಉಗ್ರರು ಸೆಲೆಬ್ರೇಟ್ ಮಾಡಿದ್ದಾರೆ ಅಂತಾ ಹೇಳಲಾಗಿದೆ.

Source: newsfirstlive.com Source link