ಬಲೆಗೆ ಬಿತ್ತು ಬಹೃತ್ ಗಾತ್ರದ ಮೀನು.. ಮೀನುಗಾರರು ಫುಲ್ ಖುಷ್

ಬಲೆಗೆ ಬಿತ್ತು ಬಹೃತ್ ಗಾತ್ರದ ಮೀನು.. ಮೀನುಗಾರರು ಫುಲ್ ಖುಷ್

ಉಡುಪಿ: ಬೃಹತ್ ಗಾತ್ರದ ಮೀನು ಒಂದು ಬಲೆಗೆ ಬಿದ್ದಿರೋ ಘಟನೆ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ.

ಖಾರ್ವಿಕೇರಿ ನಿವಾಸಿ ಸಂತೋಷ ಖಾರ್ವಿ ಎಂಬವವರು ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಮೀನು ದೊರೆತಿದೆ. ಸುಮಾರು 5 ಅಡಿ ಎತ್ತರ 25 ಕೆ.ಜಿ. ತೂಕ ಭಾರವಿದೆ. ಕೊಳಸ ಹೆಸರಿನ ಈ ಮೀನಿಗೆ ಮಾರುಕಟ್ಟೆಯಲ್ಲಿ 7 ಸಾವಿರ ರೂಪಾಯಿಗೆ ಬೇಡಿಕೆ ಇದೆ.

ಇನ್ನು ಈ ಮೀನನ್ನು ನೋಡಲು ಮೀನುಪ್ರಿಯರು ಮುಗಿಬಿದ್ದ ಪ್ರಸಂಗ ನಡೆಯಿತು.

Source: newsfirstlive.com Source link