ಪಾಕ್​ನಲ್ಲೂ ಉಗ್ರರ ಆಟಾಟೋಪ; ಮಹಾರಾಜ ರಣ್​​ಜಿತ್ ಸಿಂಗ್ ಪ್ರತಿಮೆ ಧ್ವಂಸ

ಪಾಕ್​ನಲ್ಲೂ ಉಗ್ರರ ಆಟಾಟೋಪ; ಮಹಾರಾಜ ರಣ್​​ಜಿತ್ ಸಿಂಗ್ ಪ್ರತಿಮೆ ಧ್ವಂಸ

ಲಾಹೋರ್: ಪಾಕಿಸ್ತಾನದ ಉಗ್ರ ಸಂಘಟನೆಗಳಲ್ಲಿ ಒಂದಾದ ತೆಹ್ರೀಕ್ ಎ ಲಬ್ಬಾಯ್ಕ್ ಸಂಘಟನೆಯ ಸದಸ್ಯನೋರ್ವ ಲಾಹೋರ್ ಬಳಿ ನಿರ್ಮಿಸಲಾಗಿದ್ದ ಮಹಾರಾಜ್ ರಣ್​ಜಿತ್ ಸಿಂಗ್ ಪ್ರತಿಮೆಯನ್ನ ಧ್ವಂಸ ಮಾಡಿದ್ದಾನೆ. ಪೊಲೀಸರು ದುಷ್ಕರ್ಮಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಅಲ್ಲಿಗೆ ಹೋಗೋದು ತುಂಬಾನೇ ಡೇಂಜರ್; ನಮ್ಮನ್ನ ಸಾಯಿಸಲೂಬಹುದು -ಆಫ್ಘಾನ್ ವಿದ್ಯಾರ್ಥಿನಿ ಆತಂಕ

ಲಾಹೋರ್ ಕೋಟೆಯ ಕಾಂಪ್ಲೆಕ್ಸ್​ನಲ್ಲಿ ಈ ಪ್ರತಿಮೆಯನ್ನ ನಿರ್ಮಿಸಲಾಗಿತ್ತು. ಈ ಹಿಂದೆಯೂ ಎರಡು ಬಾರಿ ಈ ಪ್ರತಿಮೆಯನ್ನ ಧ್ವಂಸಗೊಳಿಸಲಾಗಿತ್ತು. 9 ಅಡಿಯ ಈ ಪ್ರತಿಮೆಯನ್ನು ಕೋಲ್ಡ್ ಕಂಚಿನಿಂದ ನಿರ್ಮಿಸಲಾಗಿದ್ದು 2019 ರ ಜೂನ್​ನಲ್ಲಿ ರಣ್​ಜಿತ್ ಸಿಂಗ್​ರ ನೂರನೇ ಪುಣ್ಯತಿಥಿಯಂದು ಅನಾವರಣಗೊಳಿಸಲಾಗಿತ್ತು. ಮಹಾರಾಜ ರಣ್​​ಜಿತ್ ಸಿಂಗ್ ಸಿಖ್ ರಾಜಮನೆತನದ ಮೊದಲ ರಾಜನಾಗಿದ್ದರು. ಸುಮಾರು 40 ವರ್ಷಗಳ ಕಾಲ ಪಂಜಾಬ್​ನ್ನು ಆಳಿದ್ದರು. 1839 ರಲ್ಲಿ ಮಹಾರಾಜ ರಣ್​ಜಿತ್ ಸಿಂಗ್ ಸಾವನ್ನಪ್ಪಿದ್ದರು.

 

ದುರಾದೃಷ್ಟ ಎಂದರೆ ಪ್ರತಿಮೆ ಅನಾವರಣಗೊಂಡ ಪ್ರಾರಂಭದಲ್ಲೇ ಅಂದ್ರೆ ಎರಡೇ ತಿಂಗಳಲ್ಲಿ ಧ್ವಂಸಗೊಳಿಸಲಾಗಿತ್ತು. ತೆಹ್ರೀಕ್ ಎ ಲಬ್ಬಾಯ್ಕ್​ ಸಂಘಟನೆಯ ಇಬ್ಬರು ಸದಸ್ಯರು ಆಗ ಪ್ರತಿಮೆಯನ್ನ ಧ್ವಂಸಗೊಳಿಸಿದ್ದರು. ಅವರನ್ನು ಬಂಧಿಸಲಾಗಿತ್ತು.

Source: newsfirstlive.com Source link