ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷ -ರಾಯಚೂರಲ್ಲಿ ಸುರ್ಜೇವಾಲಾ ವಾಗ್ದಾಳಿ

ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷ -ರಾಯಚೂರಲ್ಲಿ ಸುರ್ಜೇವಾಲಾ ವಾಗ್ದಾಳಿ

ರಾಯಚೂರು: ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷವಾಗಿದೆ ಅಂತಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗುಡುಗಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು.. ಪಕ್ಷದಲ್ಲಿರುವ ಗೊಂದಲ ದೂರು ಮಾಡುವುದು ಇಂದಿನ ನಮ್ಮ ಸಭೆಯ ಉದ್ದೇಶವಾಗಿದೆ. ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷವಾಗಿದೆ. ಬಿಜೆಪಿ ಸದಾಕಾಲವೂ ಕಲ್ಯಾಣ ‌ಕರ್ನಾಟಕವನ್ನ ಕಡೆಗಣನೆ‌ ಮಾಡುತ್ತಲೇ ಬಂದಿದೆ. 15 ನೂರು ಕೋಟಿಯಲ್ಲಿ 630 ಕೋಟಿ‌ ಮಾತ್ರ ಬಿಡುಗಡೆ ‌ಮಾಡಿದೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕೊರೊನಾದಿಂದ ಮೃತರ ಪ್ರಮಾಣ ಪತ್ರ ಸಹ ಸಿಗುತ್ತಿಲ್ಲ. 371(ಜೆ) ವಿಶೇಷ ಸ್ಥಾನಮಾನ ಈ ಪ್ರದೇಶಕ್ಕೆ ನೀಡಿದ್ದಾರೆ. 371(ಜೆ ) ಅಡಿಯಲ್ಲಿ ನೇಮಕಾತಿಯೂ ಸಹ ಮಾಡುತ್ತಿಲ್ಲ. ಕಳೆದ ವರ್ಷದಿಂದ ಬೆಳೆ ವಿಮೆ ಕೂಡ ಸಹ ರೈತರಿಗೆ ಸಿಕ್ಕಿಲ್ಲ. ಯಡಿಯೂರಪ್ಪಗೆ ಮೋದಿ ಅವಮಾನಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ.

ಯಡಿಯೂರಪ್ಪ ಏಕೆ ಅಧಿಕಾರದಿಂದ ಇಳಿಸಿದ್ರೂ ಎಂಬುವುದು ಮೋದಿ ಹೇಳಲಿ. ಕೇವಲ ಕರ್ನಾಟಕದಲ್ಲಿ ಮಂತ್ರಿಗಾಗಿ ನಾಯಕರ ಕಿತ್ತಾಟವೇ ನಡೆದಿದೆ. ರಾಜ್ಯದ ಜನರಿಗೆ ಬಿಜೆಪಿ ಕೊಡುಗೆ ಏನು ಎಂಬುವುದು ಹೇಳಲಿ ಅಂತಾ ಕಿಡಿಕಾರಿದ್ದಾರೆ.

Source: newsfirstlive.com Source link