ತಾಲಿಬಾನಿ ಉಗ್ರರ ವಿಕೃತಿ: ಏರ್​​ಫೋರ್ಸ್​ ಸಿಬ್ಬಂದಿ ಮನೆಗೆ ನುಗ್ಗಿ ರೇಪ್; ಸಾಮೂಹಿಕ ಕಗ್ಗೊಲೆ

ತಾಲಿಬಾನಿ ಉಗ್ರರ ವಿಕೃತಿ: ಏರ್​​ಫೋರ್ಸ್​ ಸಿಬ್ಬಂದಿ ಮನೆಗೆ ನುಗ್ಗಿ ರೇಪ್; ಸಾಮೂಹಿಕ ಕಗ್ಗೊಲೆ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿಧ್ವಂಸಕ, ಕುಕೃತ್ಯಗಳು ಮತ್ತಷ್ಟು ದಿನದಿಂದ ದಿನಕ್ಕೆ ಜೋರಾಗಿದೆ. ಇದೀಗ ತಾಲಿಬಾನಿಗಳು ಆಫ್ಘಾನ್​​ ಏರ್​ಫೋರ್ಸ್​ ಪೈಲಟ್​​ಗಳನ್ನ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಅಲ್ಲಿನ ಪೈಲಟ್​ ರಹಮಾನ್ ರಹಮಾನಿ ನೀಡಿರುವ ಮಾಹಿತಿ ಪ್ರಕಾರ.. ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದಲ್ಲಿರುವ ಏರ್​ಫೋರ್ಸ್​ ಪೈಲಟ್​ಗಳ ಮನೆಗೆ ನುಗ್ಗಿ, ಮನೆಯಲ್ಲಿರುವ ಮಹಿಳೆಯರನ್ನ ರೇಪ್ ಮಾಡಿ ಸಾಯಿಸುತ್ತಿದ್ದಾರಂತೆ.

Image

ಕಾಬೂಲ್​​ನಲ್ಲಿರುವ ಏರಫೋರ್ಸ್​​​​ ಪೈಲಟ್​ ಮನೆಗೆ ದಾಳಿ ಮಾಡುತ್ತಿದ್ದಾರೆ. ಮನೆಯಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಂತರಲ್ಲ ಎಲ್ಲರನ್ನೂ ಹತ್ಯೆ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಇಲ್ಲಿನ ಪೈಲಟ್​​​ಗಳಿಗೆ, ಪೊಲೀಸ್​ ಆಫೀಸರ್ಸ್​​​ಗೆ, ಸಿವಿಲ್ ಸೊಸೈಟಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಕಾಬೂಲ್ ಸೇಫ್ ಅಲ್ಲ ಎಂದು ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.

Source: newsfirstlive.com Source link