ಕಾಂಗ್ರೆಸ್​​​ನ ಕೆ.ಸಿ ವೇಣುಗೋಪಾಲ್, ಬಿಜೆಪಿ ಉಪಾಧ್ಯಕ್ಷ ಸೇರಿ ಹಲವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಕಾಂಗ್ರೆಸ್​​​ನ ಕೆ.ಸಿ ವೇಣುಗೋಪಾಲ್, ಬಿಜೆಪಿ ಉಪಾಧ್ಯಕ್ಷ ಸೇರಿ ಹಲವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಕೊಚ್ಚಿ: ಸೋಲಾರ್ ಸ್ಕ್ಯಾಮ್ ಕೇಸ್​​ನಲ್ಲಿ ಮಹಿಳಾ ಉದ್ಯೋಗಿಯೋರ್ವಳ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಜಿ ಕೇರಳ ಸಿಎಂ ಓಮ್ಮೆನ್ ಚಾಂಡಿ, ಕಾಂಗ್ರೆಸ್ ಸಂಸದರಾದ ಅಡೂರ್ ಪ್ರಕಾಶ್, ಹಿಬಿ ಎಡೆನ್ ಮತ್ತು ಕಾಂಗ್ರೆಸ್ ಎಮ್​ಎಲ್​ಎ ಅನಿಲ್ ಕುಮಾರ್ ಅವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿಕೊಂಡಿದೆ.

blank

ಎಫ್​ಐಆರ್​ನಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಾ ಕುಟ್ಟಿ ಎಂಬುವವರ ಹೆಸರೂ ಉಲ್ಲೇಖಗೊಂಡಿದೆ ಎನ್ನಲಾಗಿದೆ.
ಸಿಬಿಐ ಎಫ್​​ಐಆರ್​ನ್ನು ಕೊಚ್ಚಿ ಮತ್ತು ತಿರುವನಂತಪುರಂನ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್​​ಗಳಿಗೆ ಸಲ್ಲಿಸಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕೇರಳ ಸರ್ಕಾರ ಈ ಕೇಸ್​​ನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನ ಕರೆತರಲು ಫೀಲ್ಡ್​ಗೆ ಇಳಿದ ಅಜಿತ್ ದೋವಲ್

ಈ ಕೇಸ್​ನಲ್ಲಿ ದೂರುದಾರ.. ಸೋಲಾರ್ ಪ್ರಾಜೆಕ್ಟ್​ಗೆ ಸಂಬಂಧಿಸಿದಂತೆ ಈ ನಾಯಕರನ್ನು ಭೇಟಿಯಾದಾಗ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಸಚಿವರ ನಿವಾಸಗಳಲ್ಲಿ, ಎಮ್​ಎಲ್​ಎಗಳ ಹೋಟೆಲ್​ಗಳಲ್ಲಿ ಈ ದೌರ್ಜನ್ಯ ನಡೆದಿದೆ ಎಂದು ಆರೋಪ ಹೊರಿಸಿದ್ದಾರೆ. ಇವರ ವಿರುದ್ಧ ಪೊಲೀಸರು 2018 ರಲ್ಲೂ ಕೇಸ್ ದಾಖಲಿಸಿಕೊಂಡಿದ್ದರು ಎಂಬ ಮಾಹಿತಿ ಇದೆ.

Source: newsfirstlive.com Source link