ವಾವ್​ ಅನ್ನುವಂತಿದೆ ನಟಿ ಶ್ರೀದೇವಿ ಪುತ್ರಿ ಖುಷಿ ಧರಿಸಿದ ಥೈ ಸ್ಲಿಟ್​​​ ಫ್ಲವರ್​​ ಡ್ರೆಸ್

ವಾವ್​ ಅನ್ನುವಂತಿದೆ ನಟಿ ಶ್ರೀದೇವಿ ಪುತ್ರಿ ಖುಷಿ ಧರಿಸಿದ ಥೈ ಸ್ಲಿಟ್​​​ ಫ್ಲವರ್​​ ಡ್ರೆಸ್

ಬಾಲಿವುಡ್​​ ನಟ ಅನಿಲ್ ಕಪೂರ್​​ ಮತ್ತು ಸುನೀತಾ ಕಪೂರ್ ಕಿರಿಯ ಪುತ್ರಿ ರಿಯಾ ಕಪೂರ್ ಆಗಸ್ಟ್​ 14ರಂದು ಕರಣ್​​ ಬೂಲಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಕಾರಣದಿಂದ ಆಪ್ತರ ಸಮ್ಮುಖದಲ್ಲಿ ಮಾತ್ರ ಮದುವೆ ನಡೆದ ಕಾರಣ ನವದಂಪತಿ ಮುಂಬೈನ ಜಹುವಿನಲ್ಲಿರೋ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿ ಪಾರ್ಟಿ ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಎಲ್ಲರ ಗಮನ ಸೆಳೆಯಲು ಯಶಸ್ವಿಯಾಗಿದ್ದರು.

ಪಾರ್ಟಿಗೆ ಹಾಜರಾಗಿದ್ದ ಖುಷಿ ಕಾಪೂರ್ ಬಿಳಿ ಬಣ್ಣದ ಥೈ ಸ್ಲಿಟ್​​​ ಪ್ಲವರ್​​ ಡ್ರೆಸ್​​​​​​​​ನಲ್ಲಿ ಕಾಣಿಸಿಕೊಂಡಿದ್ದರು, ಸಿಂಪಲ್​ ಆಗಿ ಕಾಣಿಸಿಕೊಂಡರು, ತಮ್ಮ ಔಟ್​​ಫಿಟ್​​ನಿಂದ ಎಲ್ಲರು ತಮ್ಮತ್ತ ತಿರುಗಿ ನೀಡುವಂತೆ ಮಾಡಿದ್ದರು. ಅಂದು ಖುಷಿ ಧರಿಸಿದ್ದ ಈ ಉಡುಪು ಬ್ರಿಟಿಷ್ ಲಕ್ಸುರಿ ಲೆಬಲ್​​ ಹೌಸ್​​ ಆಫ್​ ಸಿಬಿಯಿಂದ ಖರೀದಿ ಮಾಡಿದ್ದು, ಡ್ರೆಸ್​ ಬೆಲೆ ಕೇವಲ 15 ಸಾವಿರ ರೂಪಾಯಿಗಿಂತ ಕಡಿಮೆ ಇದೆ. ಕಪೂರ್ ಫ್ಯಾಮಿಲಿಯ ಅದ್ಧೂರಿ ಸಮಾರಂಭದಲ್ಲಿ ಬಿಳಿ ಹೂವಿನ ಮುದ್ರಣದಿಂದ ಅಲಂಕರಿಸಲ್ಪಟ್ಟ ಸ್ಟ್ರೆಚ್ ಕಾಟನ್ ಪಾಪ್ಲಿನ್ ಬಟ್ಟೆಯನ್ನು ಆಯ್ಕೆ ಮಾಡಿಕೊಂಡು ಖುಷಿ ಕಪೂರ್ ಅಚ್ಚರಿ ಮೂಡಿಸಿದ್ದಾರೆ.

Source: newsfirstlive.com Source link