‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

ಚಂದನವನದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದ್ರೂ ಕೂಡ ಸಿನಿಮಾ ತಂಡಗಳು ಪ್ರೇಕ್ಷಕರಿಗೆ ಮನರಂಜನೆ ನೀಡೋಕೆ ಚಿತ್ರಮಂದಿರಕ್ಕೆ ಬರಲುರೆಡಿಯಾಗಿವೆ. ಒಂದೊಂದೇ ಚಿತ್ರತಂಡಗಳು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿವೆ. ಅಂತೆಯೇ ಈ ವಾರ ಚಿತ್ರಮಂದಿರಕ್ಕೆ ಹೊಸಬರ ಹೊಸತನವಿರುವ `ಗ್ರೂಫಿ’ ಸಿನಿಮಾ ತೆರೆಗೆ ಬರುತ್ತಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ‘ಗ್ರೂಫಿ’ ಚಿತ್ರದ ಹಾಡುಗಳು ಸಾಕಷ್ಟು ಗಮನ ಸೆಳೆಯುತ್ತಿವೆ. ಟ್ರೇಲರ್ ಕೂಡ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡು ನಿರೀಕ್ಷೆ ಹೆಚ್ಚಿಸಿದೆ. ಸೆಲ್ಫಿಯಿಂದಾಗಬಹುದಾದ ಮಾರಕತೆಯನ್ನು ಎಳೆಯಾಗಿಟ್ಟುಕೊಂಡು ಸಾಮಾಜಿಕ ಸಂದೇಶವನ್ನು ಹೇಳ ಹೊರಟಿದೆ ಚಿತ್ರತಂಡ. ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ಹೊಸ ಪ್ರತಿಭೆಗಳ ಆಗಮನವಾಗಿದೆ.

ಕೆ.ಜಿ.ಸ್ವಾಮಿ ಈ ಚಿತ್ರದ ನಿರ್ಮಾಪಕರು. ಜಾಹೀರಾತು ಏಜೆನ್ಸಿ ಹಾಗೂ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಹೊಂದಿರುವ ಇವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕ್ಷೇತ್ರದ ಮೇಲಿನ ಅಭಿಮಾನದಿಂದ ಫಿಲ್ಮಂ ಮೇಕಿಂಗ್ ಕೋರ್ಸ್ ಕೂಡ ಮಾಡಿಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಕಾಯುತ್ತಿದ್ದ ಇವರಿಗೆ ‘ಗ್ರೂಫಿ’ ಸಿನಿಮಾ ಕಥೆ ಸಖತ್ ಇಂಪ್ರೆಸ್ ಮಾಡಿದೆ. ಆದ್ರಿಂದ ತಮ್ಮ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಮೊದಲ ಸಿನಿಮಾವಾಗಿ ‘ಗ್ರೂಫಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ‘ಗ್ರೂಫಿ’ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮೈಸೂರು ಮಹಾರಾಜ ಯದುವೀರ್

blank

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಆರ್ಯನ್, ಪದ್ಮಶ್ರೀ ಜೈನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಡಿ.ರವಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉಳಿದಂತೆ ಉಮಾ ಮಯೂರಿ, ಗಗನ್, ಪ್ರಜ್ವಲ್, ಸಂಧ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಲಕ್ಷೀಕಾಂತ್ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಆಗಸ್ಟ್ 20ರಂದು ‘ಗ್ರೂಫಿ’ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿದೆ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

Source: publictv.in Source link