ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್: ‘ರಾಜ್​ ಕುಮಾರ್ ಲರ್ನಿಂಗ್​ ಆ್ಯಪ್’​ ಶುರು ಮಾಡಿದ ಡಾ.ರಾಜ್​ ಕುಟುಂಬ

ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್: ‘ರಾಜ್​ ಕುಮಾರ್ ಲರ್ನಿಂಗ್​ ಆ್ಯಪ್’​ ಶುರು ಮಾಡಿದ ಡಾ.ರಾಜ್​ ಕುಟುಂಬ

ಡಾ.ರಾಜ್​ಕುಮಾರ್​ ಕುಟಂಬ ಯುಪಿಎಸ್​ಇ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡಲು ರಾಜ್​ಕುಮಾರ್​ ಲರ್ನಿಂಗ್ ಆ್ಯಪ್​ ಪರಿಚಯಿಸಿದ್ದಾರೆ. ಅಣ್ಣಾವ್ರ ಮೊಮ್ಮಗ ಯುವ ರಾಜ್​ಕುಮಾರ್​ಭಾರತೀಯ ಲೋಕ ಸೇವಾ ಆಯೋಗ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡುವ ಸಲುವಾಗಿ 2017ರಲ್ಲಿ ರಾಜ್​ಕುಮಾರ್​ ಅಕಾಡೆಮಿ ಆರಂಭಿಸಿದ್ರು.

ರಾಜ್​ಕುಮಾರ್​ ಅಕಾಡೆಮಿ ಸಂಸ್ಥೆ ವತಿಯಿಂದ ಈಗಾಗಲೆ ಸಾಕಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ಆದ್ರೆ ಕೋವಿಡ್​ ಕಾರಣದಿಂದಾಗಿ ಆಫ್​ಲೈನ್​ ಶಿಕ್ಷಣ ನೀಡಲು ಆಗದ ಕಾರಣ ಇದೀಗ ರಾಜ್​ಕುಮಾರ್​ ಅಕಾಡೆಮಿ ಸಂಸ್ಥೆ ಅನ್​ಲೈನ್​ ಶಿಕ್ಷಣಕ್ಕೆ ಒತ್ತು ನೀಡಿ ರಾಜ್​ಕುಮಾರ್​ ಲರ್ನಿಂಗ್​ ಅ್ಯಪ್​ನ್ನು ಪರಿಚಯಿಸಿದೆ.

blank

ಮುಖ್ಯ ಮಂತ್ರಿ ಬಸವರಾಜ್​ ಬೊಮ್ಮಾಯಿ ರಾಜ್​ಕುಮಾರ್​ ಲರ್ನಿಂಗ್​ ಅ್ಯಪ್​ನ್ನು ಬಿಡುಗಡೆ ಮಾಡಿದ್ದಾರೆ. ಌಪ್​ ಬಡುಗಡೆ ಬಳಿಕ ಮಾತನಾಡಿದ ಅವರು ಡಾ.ರಾಜ್ ಕುಮಾರ್​ ಓರ್ವ ಸಾಧಕ. ರಾಜ್​ಕುಮಾರ್​ರವರ ನುಡಿ, ಮೌಲ್ಯ, ಅವರ ಸರಳತನ್ನ ನಾವು ಕಲಿಯಬೇಕು. ರಾಜ್ ಕುಮಾರ್​ ಅವರಷ್ಟು ಸರಳವಾಗಿ ಇರಲು ಬೇರೆ ಯಾರಿಂದಲೂ ಸಾಧ್ಯವೇ ಇಲ್ಲ ಎಂಬುದು ನನ್ನ ಭಾವನೆ ಎಂದು ಬಸವರಾಜ್​ ಬೊಮ್ಮಾಯಿ ಹೇಳಿದರು.

ಇನ್ನು ಈ ವೇಳೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಸಹ ಮಾತನಾಡಿ.. 2017ರಲ್ಲಿ ನಮ್ಮ ಯುವ ಹಾಗೂ ಅವನ ತಂಡ ರಾಜ್​ಕುಮಾರ್​ ಅಕಾಡೆಮಿ ಶುರು ಮಾಡಿದ್ರು. ಈಗ ಇದಕ್ಕೆ ರಾಜ್​ಕುಮಾರ್​ ಲರ್ನಿಂಗ್​ ಆ್ಯಪ್ ಕೂಡ ಚಿಕ್ಕದಾಗಿ ಆ್ಯಡ್​ ಆಗಿದೆ. ಈ ಌಪ್ ಸಕ್ಸಸ್​ಫುಲ್ ಆಗ್ಲಿ, ಮಕ್ಕಳು ಶಾಲೆ ಕಾಲೇಜು ತುಂಬಾ ಮಿಸ್​ ಮಾಡ್ಕೊತ್ತಿದ್ದಾರೆ. ಅದಷ್ಟು ಬೇಗ ಈ ಕೋವಿಡ್ ನಮ್ಮನು ಬಿಟ್ಟು ಹೋಗ್ಲಿ ಅಂತಾ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಪುನೀತ್​ ಹೇಳಿದ್ರು.

Source: newsfirstlive.com Source link