ಮಳೆ ಕಮ್ಮಿ ಆಗ್ತಿದ್ದಂತೆ ಸಮುದ್ರಕ್ಕೆ ಇಳಿದ ಹವ್ಯಾಸಿ ಮೀನುಗಾರರು

ಮಳೆ ಕಮ್ಮಿ ಆಗ್ತಿದ್ದಂತೆ ಸಮುದ್ರಕ್ಕೆ ಇಳಿದ ಹವ್ಯಾಸಿ ಮೀನುಗಾರರು

ಉಡುಪಿ: ಮುಂಗಾರು ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬಿ ಸಮುದ್ರದಲ್ಲಿ ಹವ್ಯಾಸಿ ಮೀನುಗಾರಿಕೆ ಜೋರಾಗಿದೆ.

ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿರುವ ಯುವಕರು ದೋಣಿಗಳ ಜೊತೆ ಅರಬ್ಬಿ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಉದ್ಯಾವರ ನಾಗೇಶ್ ಕುಮಾರ್ ಮತ್ತು ಅವರ ಗೆಳೆಯರ ತಂಡ ಅರಬ್ಬಿ ಸಮುದ್ರದಲ್ಲಿ ಗಾಳ ಹಾಕಿದಾಗ ಶಾರ್ಕ್ ಮೀನೊಂದು ಗಾಳಕ್ಕೆ ಸಿಲುಕಿತ್ತು.

ಗಾಳಕ್ಕೆ ಸಿಲುಕಿದ ನಂತರ ಕೆಲಕಾಲ ಸೆಣೆಸಾಟ ನಡೆಸಿದೆ. ತುಳುವಿನಲ್ಲಿ ತಾಟೆ ಮೀನು ಎಂದು ಕರೆಯುತ್ತಾರೆ. ಇದು ಬಹಳ ರುಚಿಕರವಾದ ಮೀನು ಇದಾಗಿದೆ. ಮಳೆಗಾಲದಲ್ಲಿ ಈ ಜಾತಿಯ ಮೀನುಗಳು ಸಮುದ್ರ ತೀರಕ್ಕೆ ಬರುತ್ತವೆ. ಬೇಸಿಗೆಯಲ್ಲಿ ಆಳ ಸಮುದ್ರದಲ್ಲಿ ಇರುತ್ತವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

Source: newsfirstlive.com Source link