ತಾಲಿಬಾನ್​ ಕೊಂದ್ರೂ ಪರ್ವಾಗಿಲ್ಲ.. ದೇವರ ಪೂಜೆ ಬಿಟ್ಟು ಹೋಗಲ್ಲ -ಅಘ್ಘನ್​​​ ದೇವಾಲಯದ ಅರ್ಚಕ

ತಾಲಿಬಾನ್​ ಕೊಂದ್ರೂ ಪರ್ವಾಗಿಲ್ಲ.. ದೇವರ ಪೂಜೆ ಬಿಟ್ಟು ಹೋಗಲ್ಲ -ಅಘ್ಘನ್​​​ ದೇವಾಲಯದ ಅರ್ಚಕ

ನವದೆಹಲಿ: ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ನಡೆಸುತ್ತಿರುವ ದಾಂಧಲೆ ಇಡೀ ವಿಶ್ವವನ್ನೆ ಬೆರಗು ಆಗುವಂತೆ ಮಾಡಿದೆ. ನಿನ್ನೆ ಕಾಬೂಲ್ ಏರ್​ಪೋರ್ಟ್​ನಲ್ಲಿ ನಡೆದ ದೃಶ್ಯ ಮನುಷ್ಯತ್ವ ಮತ್ತು ಮಾನವೀತೆಯುಳ್ಳ ಮನುಷ್ಯರ ಹೃದಯವನ್ನ ಹಿಂಡಿತ್ತು. ಇಂತಹ ಕರಾಳ ದೃಶ್ಯಗಳು ಅಫ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಗತಿಸುತ್ತಿವೆ. ತಾಲಿಬಾನಿ ಉಗ್ರರು ನಡೆಸ್ತಿರುವ ಪೈಶಾಚಿಕ ಕೃತ್ಯಗಳು ಅಲ್ಲಿನ ನಾಗರಿಕರ ಬದುಕು ಹಿಂಡಿ ಹಿಪ್ಪೆ ಮಾಡುತ್ತಿವೆ.

ಇದನ್ನೂ ಓದಿ: ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಯಾಕೆ?

ಇದೇ ಕಾರಣಕ್ಕೆ ಬಹುತೇಕ ನಾಗರಿಕರು ದೇಶ ತೊರೆಯುತ್ತಿದ್ದಾರೆ. ಉಗ್ರರ ದುಷ್ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿರುವ ಅಲ್ಪಸಂಖ್ಯಾತರ ಪರಿಸ್ಥಿತಿ ಮಾತ್ರ ಇನ್ನೂ ಹೇಳ ತೀರದು. ಇಂತಹ ಕಠೋರ ಸ್ಥಿತಿಯಲ್ಲೂ ಅಲ್ಲಿರುವ ಹಿಂದೂ ದೇವಾಲಯದ ಒಂದರ ಅರ್ಚಕರೊಬ್ಬರು ತಾವು ದೇವರ ಮೇಲೆ ಇಟ್ಟಿರುವ ಸೇವೆ ಹಾಗೂ ನಂಬಿಕೆಯ ಕಾರಣಕ್ಕೆ ಸಖತ್ ಸುದ್ದಿಯಾಗುತ್ತಿದ್ದಾರೆ.

ಅವರ ಹೆಸರು ರಾಜೇಶ್ ಕುಮಾರ್. ಇವರು ಕಾಬೂಲ್​​ನಲ್ಲಿರುವ ರಟ್ಟನ್ ನಾಥ್ ದೇಗುಲದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಗ್ರರ ಕಾಟ ಜೋರಾಗಿದ್ದರೂ ನಾನು ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನವನ್ನ ತೊರೆಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪಾಕ್​ನಲ್ಲೂ ಉಗ್ರರ ಆಟಾಟೋಪ; ಮಹಾರಾಜ ರಣ್​​ಜಿತ್ ಸಿಂಗ್ ಪ್ರತಿಮೆ ಧ್ವಂಸ

ಕೆಲವು ವರದಿಗಳ ಪ್ರಕಾರ ಈಗಾಗಲೇ ರಾಜೇಶ್ ಕುಮಾರ್ ಅವರ ಹಿಂದೂ ಪರಿಚಯಸ್ಥರು, ಅಫ್ಘಾನಿಸ್ತಾನವನ್ನ ತೊರೆಯಲು ಸಹಾಯ ಮಾಡುವಂತೆ ಕೋರಿಕೊಂಡಿದ್ದಾರೆ. ಆದರೆ ಅವರ ಮನವಿಯಲ್ಲೂ ಇವರು ತಿರಸ್ಕರಿಸಿದ್ದಾರೆ. ಆದರೆ ದೇವರಲ್ಲಿ ನಂಬಿಕೆಯಿಟ್ಟು, ಪೂಜೆಯಲ್ಲಿ ನಿಷ್ಠೆಯನ್ನ ಕಂಡಿರುವ ಅವರು ಉಗ್ರರ ದಾಂಧಲೆ ಮಧ್ಯೆಯೂ ಪೂಜೆ ಮಾಡೋದನ್ನ ಮಾತ್ರ ಇನ್ನೂ ನಿಲ್ಲಿಸಿಲ್ಲ ಅಂತಾ ಹೇಳಲಾಗಿದೆ.

‘ಅದು ನನ್ನ ಸೇವೆ ಅಂದ್ಕೋತಿನಿ’
ಟ್ವಿಟರ್​ ಯೂಸರ್ ಭಾರಧ್ವಾಜ್ ಅನ್ನೋರು ನೀಡಿರುವ ಮಾಹಿತಿ ಪ್ರಕಾರ.. ಪಂಡಿತ್ ರಾಜೇಶ್ ಕುಮಾರ್, ಕಾಬೂಲ್​​ನಲ್ಲಿರುವ ದೇವಾಲಯದ ಅರ್ಚಕರಾಗಿ ದೇವರ ಸೇವೆ ಸಲ್ಲಿಸುತ್ತಿದ್ದಾರೆ. ‘‘ಕೆಲ ಹಿಂದೂಗಳು ಕಾಬೂಲ್ ತೊರೆಯುವಂತೆ ನನ್ನ ಒತ್ತಾಯಿಸಿದ್ದಾರೆ. ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಆದರೆ ನನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ಮಂದಿರಕ್ಕೆ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ನಾನು ಅದನ್ನು ಕೈಬಿಡುವುದಿಲ್ಲ. ತಾಲಿಬಾನ್ ನನ್ನನ್ನು ಕೊಂದರೆ, ನಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ’’ ಎನ್ನುತ್ತಿದ್ದಾರೆ ಅಂತಾ ಭಾರಧ್ವಾಜ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Source: newsfirstlive.com Source link