ಸಿನಿಮಾ ಸ್ಟೈಲ್​ನಲ್ಲಿ ಬ್ಯಾಂಕ್​ಗೆ ವಂಚಿಸಿದ ಸ್ಯಾಂಡಲ್​​ವುಡ್​ ನಿರ್ದೇಶಕ.. ಪೊಲೀಸರಿಂದ ಅರೆಸ್ಟ್

ಸಿನಿಮಾ ಸ್ಟೈಲ್​ನಲ್ಲಿ ಬ್ಯಾಂಕ್​ಗೆ ವಂಚಿಸಿದ ಸ್ಯಾಂಡಲ್​​ವುಡ್​ ನಿರ್ದೇಶಕ.. ಪೊಲೀಸರಿಂದ ಅರೆಸ್ಟ್

ಬೆಂಗಳೂರು: ಇದು ಸ್ಯಾಂಡಲ್​ವುಡ್ ನಿರ್ದೇಶಕನೊಬ್ಬನ ಖತರ್ನಾಕ್ ಸ್ಟೋರಿ. ಮಾಡಿದ ಸಿನಿಮಾ ಫ್ಲಾಫ್​ ಆಯ್ತು ಅಂತ ಅಡ್ಡ ದಾರಿ ಹಿಡಿದ ಈತ ಮಾಡಿದ ಪ್ಲಾನ್​ ಕಂಡು ಪೊಲೀಸರು ದಂಗಾಗಿ ಬಿಟ್ಟಿದ್ದಾರೆ. ಹಾಗಾದ್ರೆ ಈ ಚಾಲಾಕಿ ನಿರ್ದೇಶಕ ಮಾಡಿದ ಆ ಮಾಸ್ಟರ್​ ಪ್ಲಾನ್​ ಏನು ಗೊತ್ತಾ?

blank

2016 ರಲ್ಲಿ ‘ಮಧುಸ್ವಪ್ನ’ ಎಂಬ ಚಿತ್ರ ನಿರ್ದೇಶಿಸಿದ್ದ ಬಾಲ ರವಿಂದ್ರನಾಥ ಎಂಬಾತ ಹಣಕಾಸಿನ ತೊಂದರೆ ಎದುರಾಗಿ, ಖಾಸಗಿ ಬ್ಯಾಂಕೊಂದರಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 42.91 ಲಕ್ಷ ರೂಪಾಯಿಯ ಸಾಲ ಪಡೆದಿದ್ದನಂತೆ.
ಕೆಲ ದಿನಗಳ ಬಳಿಕ ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟುವಂತೆ ಬ್ಯಾಂಕ್​ ಆರೋಪಿ ಬಾಲ ರವಿಂದ್ರನಾಥಗೆ ಸೂಚಿಸಿದ್ದಾರೆ.

ಆದರೆ ಬ್ಯಾಂಕ್​ನ ಯಾವ ಸೂಚನೆಗೆ ಕ್ಯಾರೆ ಅನ್ನದ ನಿರ್ದೇಶಕನಿಗೆ ಕೊನೆಯದಾಗಿ ಬಡ್ಡಿ ಕಟ್ಟುವಂತೆ ಹೇಳಿದ್ದಾರಂತೆ. ಇಲ್ಲವಾದಲ್ಲಿ ತಾನು ಅಡವಿಟ್ಟ ಚಿನ್ನಾಭರಣಗಳನ್ನು ಹರಾಜು ಮಾಡುವುದಾಗಿಯೂ ಎಚ್ಚರಿಸಿದ್ದರಂತೆ. ಆದರೆ ಬ್ಯಾಂಕ್​ನ ಯಾವುದೇ ಎಚ್ಚರಿಕೆಗಳಿಗೆ ಡೋಂಟ್​ಕೇರ್​ ಎಂದು ಸಮ್ಮನಿದ್ದನಂತೆ.

blank

ಇದನ್ನೂ ಓದಿ: ಸೋದರ ಸಂಬಂಧಿ ಮದ್ವೆಯಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮಸ್ತ್ ಮಸ್ತ್ ಡ್ಯಾನ್ಸ್​

ಇದರಿಂದ ಅನುಮಾನ ಬಂದ ಬ್ಯಾಂಕ್​ ಅಧಿಕಾರಿಗಳು, ಅಡವಿಟ್ಟ ಚಿನ್ನಾಭರಣಗಳನ್ನು ತಪಾಸಣೆ ಮಾಡಿಸಿದಾಗ ಬೆಚ್ಚಿಬೀಳುವಂತ ಸಂಗತಿಯೊಂದು ಬೆಳಕಿಗೆ ಬಂದಿದೆ. ನಿರ್ದೇಶಕ ಅಡವಿಟ್ಟು ಪಡೆದಿದ್ದ ಚಿನ್ನಾಭರಣಗಳು ನಕಲಿಯಾಗಿದ್ದು, ಆಭರಣಗಳ ಮೇಲ್ಮೈ ಮಾತ್ರ ಚಿನ್ನ ಲೇಪಿತವಾಗಿದ್ದು ಒಳಗಡೆ ಇತರೆ ಲೋಹಗಳನ್ನು ಇರಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ನಿರ್ದೇಶಕನ ಸಿನಿಮ್ಯಾಟಿಕ್​ ಸ್ಟೈಲ್​ ವಂಚನೆಗೆ ಬೆಚ್ಚಿಬಿದ್ದ ಬ್ಯಾಂಕ್​ ಸಿಬ್ಬಂದಿ ಸೀದಾ ರಾಜಾಜಿನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಆರೋಪಿ ನಿರ್ದೇಶಕ ಈಗ ಪೊಲೀಸರ ಬಂಧನದಲ್ಲಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Source: newsfirstlive.com Source link