ಕೊನೆಗೂ ಒಲ್ಲದ ಮನಸ್ಸಿನಿಂದಲೇ ತಮ್ಮ ಕೊಠಡಿಗೆ ನಾಮಫಲಕ ಅಂಟಿಸಿದ ಆನಂದ್ ಸಿಂಗ್

ಕೊನೆಗೂ ಒಲ್ಲದ ಮನಸ್ಸಿನಿಂದಲೇ ತಮ್ಮ ಕೊಠಡಿಗೆ ನಾಮಫಲಕ ಅಂಟಿಸಿದ ಆನಂದ್ ಸಿಂಗ್

ಬೆಂಗಳೂರು: ನೂತನ ಸಂಪುಟ ರಚನೆಯಾಗಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ವೇಳೆ ಖಾತೆ ಕ್ಯಾತೆ ತೆಗೆದಿದ್ದವರಲ್ಲಿ ಸಚಿವ ಆನಂದ ಸಿಂಗ್​ ಮೊದಲಿಗರು. ಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ಆನಂದ್​ ಬಹಿರಂಗವಾಗಿ ತಮಗೆ ದೊರೆತ ಸಚಿವ ಸ್ಥಾನದ ವಿರುದ್ಧ ಅಸಮಾಧಾನ ಹೊರಹಾಕಿದ್ರು.

blank

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ಕೆಲ ದಿನ ಮಂತ್ರಿಗಿರಿಯಿಂದ ದೂರವೇ ಉಳಿದು ಖಾತೆ ಬಲಾಯಿಸುವಂತೆ ಪಟ್ಟು ಹಿಡಿದಿದ್ದರು. ಆಗೊಂದು, ಈಗೊಂದರಂತೆ ಪರೋಕ್ಷವಾಗಿ ರಾಜೀನಾಮೆಯ ಹೇಳಿಕೆಗಳನ್ನು ನೀಡುತ್ತಾ ಆನಂದ ಸಿಂಗ್​ ವಿಧಾನಸೌಧದಿಂದ ದೂರ ಉಳಿದಿದ್ದರು.

ಇದನ್ನೂ ಓದಿ:  ಆಫ್ಘಾನ್​ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ -ಕೇಂದ್ರ ಸಚಿವ ಜೋಶಿ ಭರವಸೆ

ಅಂದು ವೈಲೆಂಟ್ ಆಗಿದ್ದ ಸಚಿವ ಇಂದು ಸೈಲೆಂಟ್ ಆಗಿಬಿಟ್ಟಿದ್ದಾರೆ. ಅದಕ್ಕೆ ಪೂರಕ ಸಾಕ್ಷಿಗಳೆಂಬಂತೆ ವಿಕಾಸಸೌಧದಲ್ಲಿನ ಅವರ ಕೊಠಡಿಗೆ ಇಂದು ನಾಮಫಲಕ ಅಳವಡಿಸಲಾಗಿದೆ. ಆನಂದ್ ಸಿಂಗ್ ಅಸಮಾಧಾನದ ವ್ಯಕ್ತಪಡಿಸಿದ ಕಾರಣ ಇಷ್ಟು ದಿನ ಕೊಠಡಿಗೆ ನಾಮಫಲಕ ಹಾಕಿರಲಿಲ್ಲ.

blank

ಈಗ ನೀಡಿರುವ ಖಾತೆ ಬೇಡ, ಬೇರೆ ಖಾತೆ ಕೊಡಿ ಎಂದು ಮುನಿಸಿಕೊಂಡಿದ್ದ ಸಚಿವರ ಕೊಠಡಿಯ ಮುಂಭಾಗ ಈ ಮೊದಲು ನೀಡಿದ ಖಾತೆಯ ಹೆಸರನ್ನೇ ನಾಮಫಲಕದಲ್ಲಿ ನಮೂದಿಸಲಾಗಿದೆ. ಸದ್ಯ ಕೊಟ್ಟಿರುವ ಖಾತೆಯಲ್ಲಿ ಮುಂದುವರೆಯಲು ನಿರ್ಧಾರ ಮಾಡಿರುವ ಕಾರಣ ನಾಮಫಲಕ ಅಳವಡಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ನಾಳೆ ಕಚೇರಿಗೆ ಸಚಿವ ಆನಂದ ಸಿಂಗ್​ ಆಗಮಿಸುವ ಸಾಧ್ಯತೆಗಳಿವೆ.

Source: newsfirstlive.com Source link