ಕಳಂಕಿತ ಸಚಿವೆ ಪರ ನಿಂತ ಅಧಿಕಾರಿಗಳು..? ದಲಿತ ಸಂಘಟನೆಗಳಿಂದ ದೂರು

ಕಳಂಕಿತ ಸಚಿವೆ ಪರ ನಿಂತ ಅಧಿಕಾರಿಗಳು..? ದಲಿತ ಸಂಘಟನೆಗಳಿಂದ ದೂರು

ಬೆಂಗಳೂರು: ಕಳಂಕಿತ ಸಚಿವೆ ಪರ ಸರ್ಕಾರಿ ಅಧಿಕಾರಿಗಳು ನಿಂತಿರುವ ಆರೋಪದ ಮೇಲೆ ನ್ಯೂಸ್ ಫಸ್ಟ್ ವರದಿ ಬೆನ್ನಲ್ಲೇ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದಿಂದ ದೂರು ನೀಡಲಾಗಿದೆ. ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಅಪರ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ‘ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ ಇಲ್ಲ’ -ಧ್ವಜಾರೋಹಣ ಮಾಡದಂತೆ ಸಚಿವೆ ಜೊಲ್ಲೆಗೆ ಮುತ್ತಿಗೆ

ಉಪ ನಿರ್ದೇಶಕ ಬಿ.ಹೆಚ್ ನಿಶ್ಚಲ್, ಹಿರಿಯ ಸಹಾಯಕ ನಿರ್ದೇಶಕ ಎಲ್. ಮೋಹನ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುಮಂಗಳ ಮಾಳಾಪುರ್ ಎಫ್​ಡಿಎ ಎಂ.ಪಿ‌ ದಿನೇಶ್ ವಿರುದ್ದ ದೂರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ದೂರಿನಲ್ಲಿ ಏನಿದೆ..?

ನ್ಯೂಸ್ ಫಸ್ಟ್ ನಲ್ಲಿ 4/8/21 ರಲ್ಲಿ ವರದಿ ಪ್ರಸಾರವಾಗಿತ್ತು.. ಶಶಿಕಲಾ ಜೊಲ್ಲೆ ಮಿನಿಸ್ಟರ್ ಆಗುವ ಮುನ್ನ ನಮ್ಮ ಇಲಾಖೆಗೆ ಬರ್ತಾರೆ ಎಂದು ಮುಂದೆ ಅವರ ಕೃಪಾಕಟಾಕ್ಷ ಪಡೆದುಕೊಳ್ಳಲು ಮುಂದಾಗಿದ್ದರು. ಮೇಲಾಧಿಕಾರಿ ಪರ್ಮಿಷನ್ ಪಡೆಯದೇ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ, ಇಲಾಖೆಗೆ ಸೇರಿದ ಕೆಎ 01, ಜಿ 6111ವಾಹನ ಬಳಕೆ ಮಾಡಿದ್ದಾರೆ. ಶಶಿಕಲಾ ಜೊಲ್ಲೆ ದೆಹಲಿಯಿಂದ ಬರುವ ಮುನ್ನವೇ ಏರ್ ಪೋರ್ಟ್​ಗೆ ಹೋಗಿದ್ದಾರೆ. ಅವರು ದೆಹಲಿಯಿಂದ ಬೆಂಗಳೂರಿಗೆ ಬರುವತನಕ ಕಾಯ್ದಿದ್ದಾರೆ. ಏರ್ ಪೋರ್ಟ್​ಗೆ ಬಂದ ತಕ್ಷಣ ಹೂಗುಚ್ಚ ನೀಡಿ ಸ್ವಾಗತ ಕೋರುತ್ತಾರೆ. ಅಲ್ಲದೇ ಜಿರೋ ಟ್ರಾಫಿಕ್ ಮಾಡಿ ರಾಜಭವನಕ್ಕೆ ಕರೆತಂದಿದ್ದಾರೆ. ಇದಕ್ಕಾಗಿ ಜಂಟಿ ನಿರ್ದೇಶಕಿ ಬಿ. ಉಷಾರ ಇಲಾಖೆ ಕಾರನ್ನ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ: ‘ಜೊಲ್ಲೆ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಈಶ್ವರಪ್ಪ​ ನಾಚಿಕೆಗೇಡಿನ ಹೇಳಿಕೆ

ಇದು ನಾಗರೀಕ ಸೇವಾ ನಿಯಮಗಳಿಗೆ ವಿರುದ್ಧವಾದ ನಡೆಯಾಗಿದೆ. 4 ಜನ ಅಧಿಕಾರಿಗಳು ಸಹ ಪೂರ್ವಾನುಮತಿ ಪಡೆಯದೇ ಹೋಗಿದ್ದಾರೆ. ಇದು ನಾಗರೀಕ ಸೇವಾ (ನಡತೆ) ನಿಯಮ 1996 ರ ಉಲ್ಲಂಘನೆ. ಇವರೆಲ್ಲ ಸರ್ಕಾರಿ ಅಧಿಕಾರಿಗಳಾ.? ಇಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರೋ.? ಸದ್ಯ ಇದು ಅನುಮಾನ ಮೂಡಿಸುತ್ತಿದೆ. ಇವರು ಸಹ ಕೋಳಿ ಮೊಟ್ಟೆ ಖರೀದಿ ಹಗರಣದಲ್ಲಿ ಶಮೀಲಾಗಿರಬಹುದು. ಈ ಪ್ರಕರಣದಲ್ಲಿ ತೀವ್ರ ತನಿಖೆಗೆ ಒಳಪಡಿಸಿದ್ರೆ ಸತ್ಯಾಂಶ ಹೊರಬೀಳಲಿದೆ. ದಯಮಾಡಿ ಭ್ರಷ್ಟಾಚಾರ ಬಯಲಿಗೆಳೆಯವ ಕೆಲಸ ಮಾಡಿ.. ಸಚಿವರ ಕರೆತರಲು ಹೋಗಿದ್ದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇವರ ವಿರುದ್ದ ನಾಗರೀಕ ಸೇವಾ ನಿಯಮ (ಸಿಸಿಎ) 1957 ಅಡಿ ಕ್ರಮ ತೆಗೆದುಕೊಳ್ಳಿ. ತಕ್ಷಣವೇ ನಾಲ್ಕು ಮಂದಿಯನ್ನ ಸೇವೆಯಿಂದ ಅಮಾನತ್ತುಗೊಳಿಸಬೇಕು. ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಸಚಿವೆ ಶಶಿಕಲಾ ಜೊಲ್ಲೆಯನ್ನ ಸಂಪುಟದಿಂದ ವಜಾಗೊಳಿಸಿ; ಯುವ ಕಾಂಗ್ರೆಸ್​ ಪ್ರತಿಭಟನೆ

 

Source: newsfirstlive.com Source link