‘ಲವ್​ ಯೂ ರಚ್ಚು’ ಫೈಟರ್ ಸಾವು.. ಪರಿಹಾರ ಕೊಡ್ತೀವಿ ಎಂದು ಕೈ ಎತ್ತಿದ ಚಿತ್ರತಂಡ..?

‘ಲವ್​ ಯೂ ರಚ್ಚು’ ಫೈಟರ್ ಸಾವು.. ಪರಿಹಾರ ಕೊಡ್ತೀವಿ ಎಂದು ಕೈ ಎತ್ತಿದ ಚಿತ್ರತಂಡ..?

ಬೆಂಗಳೂರು: ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಕರೆಂಟ್ ಹೊಡೆದು ಫೈಟರ್​ ಸಾವನ್ನಪ್ಪಿ ಒಂದು ವಾರ ಕಳೆದರೂ ಚಿತ್ರತಂಡದಿಂದ ಮೃತನ ಕುಟುಂಬಕ್ಕೆ ಇಲ್ಲಿವರೆಗೂ ನೆರವು ಸಿಕ್ಕಿಲ್ಲ.

11ನೇ ತಾರೀಖು ಚಿತ್ರತಂಡ ಪ್ರೆಸ್ ಮೀಟ್ ಮಾಡಿ 5ಲಕ್ಷ ನೆರವು ನೀಡುವುದಾಗಿ ಹೇಳಿತ್ತು. 9ನೇ ತಾರಿಖು ಈ ಘಟನೆ ನಡೆದಿತ್ತು.  ನಿರ್ಮಾಪಕ ಗುರುದೇಶಪಾಂಡೆ ಪತ್ನಿ ಪ್ರತಿಕಾ ದೇಶಪಾಂಡೆ ಪ್ರೆಸ್ ಮೀಟ್ ವೇಳೆ 5 ಲಕ್ಷದ ಚೆಕ್ ಅನ್ನು ಕೊಡುವುದಾಗಿ ಹೇಳಿದ್ರು. ಅದ್ರೆ, ಇದುವರೆಗೂ ಚಿತ್ರತಂಡದವರು ಮೃತರ ಕುಟುಂಬಕ್ಕೆ ನೆರವು ನೀಡಿಲ್ಲ. ಫಿಲ್ಮ್ ಚೇಂಬರ್​ನಲ್ಲಿ ಮಗನ ಕಳೆದು ಕೊಂಡು ನೆರವು ಸಿಗದೆ ಮೃತನ ತಾಯಿ ಉಮಾ ಕಣ್ಣೀರಿಟ್ಟಿದ್ದಾರೆ. ನಮ್ಮ ಮಗನಿಗಾದ ಗತಿ ಯಾರಿಗೂ ಅಗೋದು ಬೇಡ, ನಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು ಅಂತ ಫಿಲ್ಮ್ ಚೇಂಬರ್​ನಲ್ಲಿ ಮನವಿ ಮಾಡಿದ್ದೇವೆ. ನಿರ್ಮಾಪಕರ ಸಂಘ ನಮಗೆ ನೆರವು ನೀಡಿಸುವ ಭರವಸೆ ನೀಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಮೃತನ ತಾಯಿ ಕಣ್ಣೀರಿಟ್ಟಿದ್ದಾರೆ.

Source: newsfirstlive.com Source link