‘ಎಲ್ರಿಗೂ ಫೋಟೋ ಕೊಡ್ತೀನಿ, ಗಾಬರಿ ಪಡಬೇಡಿ’ ಹುಟ್ಟೂರಲ್ಲಿ ಮಂಜು ಪಾವಗಡ ಆಶ್ವಾಸನೆ

‘ಎಲ್ರಿಗೂ ಫೋಟೋ ಕೊಡ್ತೀನಿ, ಗಾಬರಿ ಪಡಬೇಡಿ’ ಹುಟ್ಟೂರಲ್ಲಿ ಮಂಜು ಪಾವಗಡ ಆಶ್ವಾಸನೆ

ತುಮಕೂರು: ಮಂಜು ಪಾವಗಡ…ಬಿಗ್​ ಬಾಸ್​ ಸೀಸನ್​ 8ರ ವಿನ್ನರ್​..ಮಜಾಭಾರತ ಮೂಲಕ ಸ್ಟೇಜ್​ ಹತ್ತಿದ್ದ ಮಂಜು, ಕಿಚ್ಚ ಸುದೀಪ್​ ಪಕ್ಕ ನಿಂತು ವಿನ್ನರ್​ ಪಟ್ಟದ ತನಕ ಬರೋದಕ್ಕೆ, ತುಂಬಾ ಕಷ್ಟ ಪಟ್ಟಿದ್ದಾರೆ. ಅದೆಷ್ಟೋ ಜನ, ಮಂಜುನೇ ಬಿಗ್​ ಬಾಸ್​ ವಿನ್ನರ್​ ಅಂತ ಹೇಳ್ತಿದ್ರು. ಆಗ್ಲೇ ಗೊತ್ತಾಗುತ್ತೆ, ಮಂಜು ಕರುನಾಡ ಜನರ ಮನಸ್ಸನ್ನ ಗೆದ್​ಬಿಟ್ಟಿದ್ರು ಅಂತ. ಸುಮಾರ್​ ಸಲ ನಾಮಿನೇಟ್​ ಆಗಿ, ಸೇವ್​ ಆಗಿದ್ದ ಮಂಜು ಇಂದು ತಮ್ಮ ತವರೂರಿಗೆ ವಾರದ ನಂತರ ಹೋಗಿದ್ರು. ಈ ವೇಳೆ, ಅಲ್ಲಿ ತಮ್ಮ ಅಭಿಮಾನಿಗಳ ಬಳಿ ಲೇಟ್​ ಆಗಿ ಬಂದಿದ್ದಕ್ಕೆ ಕ್ಷಮಿಸಿ ಅಂತ ಕೇಳಿದ್ದಾರೆ.

ತುಮಕೂರಿನ ಪಾವಗಡಕ್ಕೆ ಮಂಜು ಇಂದು ಭೇಟಿ ನೀಡ್ದ್ರು.ಈ ವೇಳೆ,ತುಂಬಾ ಜನ ಅಭಿಮಾನಿಗಳುಮಂಜುಗೆ ಪೇಟ ಹಾಕಿ, ಹಾರ ಹಾಕಿ ಗೌರವವನ್ನ ಸಲ್ಲಿಸಿದ್ದರು. ಈ ವೇಳೆ, ಮಾತನಾಡಿದ ಮಂಜು, ನಾನು ಸುಮಾರು​ ದಿನದ ನಂತರ ಇಲ್ಲಿಗೆ ಬರ್ತಿದ್ದೀನಿ. ಕ್ಷಮಿಸಿ, ಕೊರೊನಾ ಇರೋದ್ರಿಂದ ತುಂಬಾ ಜನ ಸೇರಬಾರದು ಅಂತಾರೆ, ಆದ್ರೆ, ನಮ್ಮೂರವರು ಗೊತ್ತಲ್ವಾ? ಸಿಟ್ಟು ಕೋಪ ಸ್ವಲ್ಪ ಜಾಸ್ತಿ ಎಲ್ಲರೂ ಹುಷಾರಾಗಿರಿ ದಯವಿಟ್ಟು ಅಂತ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. ಅಲ್ಲದೇ, ಅವ್ರಂತೆ ಸುಮಾರ್​ ಜನ ಕಲಾವಿದರಿದ್ದಾರೆ, ಎಲ್ಲರನ್ನೂ ಬೆಳಸಿ ಅಂತ ಕೇಳಿದ್ದಾರೆ. ಜೊತೆಗೆ, ಎಲ್ಲರಿಗೂ ಫೋಟೋ ಕೊಡ್ತೀನಿ ಯಾರೂ ಗಾಬ್ರಿ ಬೀಳಬೇಡಿ ಅಂತ ಕೂಡ ಆಶ್ವಾಸನೆ ಕೊಟ್ರು.

 

Source: newsfirstlive.com Source link