ತಾಲಿಬಾನ್​ನಿಂದ ನಮ್ಮ ಕುಟುಂಬಸ್ಥರನ್ನ, ನಮ್ಮ ದೇಶವನ್ನ ಉಳಿಸಿ- ಆಫ್ಘನ್ ವಿದ್ಯಾರ್ಥಿಗಳ ಮನವಿ

ತಾಲಿಬಾನ್​ನಿಂದ ನಮ್ಮ ಕುಟುಂಬಸ್ಥರನ್ನ, ನಮ್ಮ ದೇಶವನ್ನ ಉಳಿಸಿ- ಆಫ್ಘನ್ ವಿದ್ಯಾರ್ಥಿಗಳ ಮನವಿ

ಬೆಂಗಳೂರು: ಇಡೀ ಪ್ರಪಂಚ ನಮ್ಮ ದೇಶದ ಪರವಾಗಿ ನಿಲ್ಲಬೇಕು, ತಾಲಿಬಾನ್ ದಬ್ಬಾಳಿಕೆಯನ್ನು ಮಟ್ಟಹಾಕಬೇಕು ಅಂತ ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ.

ನಮ್ಮ ಆಫ್ಘನ್ ನಾಯಕರು ಹಾಗೂ ಜನರು ಅಸಹಾಯಕರಾಗಿದ್ದಾರೆ. ಹೀಗಾಗಿ ಇಡೀ ಪ್ರಪಂಚ ಒಂದಾಗಿ ನಮ್ಮ ದೇಶ ನಮ್ಮ ಜನರನ್ನು ರಕ್ಷಿಸಿ. ಇಲ್ಲಿ ಮಾನವೀಯತೆಯನ್ನು ಉಳಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಇದೆ. ನಾವು ನಮ್ಮ ಫ್ಯಾಮಿಲಿ ಜೊತೆ ಮಾತನಾಡಿದ್ದೇವೆ. ನಮ್ಮ ಮನೆಯವರು ಮನೆಯೊಳಗೆ ಇದ್ದಾರೆ. ಮನೆಯ ಒಳಗೆ ಇದ್ರೆ ಮಾತ್ರ ಸೇಫ್ ಆಗಿರ್ತಾರೆ. ಹೊರಗಡೆ ಬಂದ್ರೆ ಜನರನ್ನು ಸಾಯಿಸುತ್ತಿದ್ದಾರೆ.. ಪ್ಲೀಸ್ ನಮ್ಮ ಕುಟುಂಬ ಹಾಗೂ ದೇಶವನ್ನ ರಕ್ಷಿಸಿ ಅಂತ ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

Source: newsfirstlive.com Source link