ಒಂದು ಕೊರೊನಾ ಪ್ರಕರಣ ಪತ್ತೆ- ಮೂರು ದಿನ ಲಾಕ್‍ಡೌನ್

ವೆಲ್ಲಿಂಗ್ಟನ್: ಒಂದು ಕೊರೊನಾ ಪ್ರಕರಣ ವರದಿಯಾಗುತ್ತಲೇ ಮೂರು ದಿನಗಳ ಕಾಲ ನ್ಯೂಜಿಲೆಂಡ್‍ನಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ.

ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆರ್ಡೆರ್ನ್ ಅವರು ದೇಶಾದ್ಯಂತ ಕಠಿಣ ಲಾಕ್‍ಡೌನ್ ನಿಯಮ ಜಾರಿಗೊಳಿಸಿದ್ದಾರೆ. ನಾಳೆಯಿಂದ ಹಿಡಿದು ಮೂರು ದಿನಗಳ ಕಾಲ ಇಡೀ ನ್ಯೂಜಿಲೆಂಡ್‍ನಲ್ಲಿ ಕಟ್ಟಿನಿಟ್ಟಿನ ಲಾಕ್‍ಡೌನ್ ಜಾರಿಯಾಗಲಿದೆ.

ನಮಗೆ ಎಚ್ಚೆತುಕೊಳ್ಳಲು ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ. ಅದರಲ್ಲಿ ವಿಫಲವಾದರೆ ಸಾಂಕ್ರಾಮಿಕ ರೋಗ ಯಾವ ರೀತಿ ಹೆಚ್ಚಾಗುತ್ತಾ ಹೋಗುತ್ತದೆ ಎನ್ನುವುದನ್ನು ಬೇರೆ ರಾಷ್ಟ್ರಗಳಲ್ಲಿ ನಾವು ಕಂಡಿದ್ದೇವೆ ಎಂದು ಪ್ರಧಾನಿ ಜಸಿಂದಾ ಆರ್ಡೆರ್ನ್ ಹೇಳಿದ್ದಾರೆ. ಇದನ್ನೂ ಓದಿ: ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ

ಅಧಿಕಾರಿಗಳು ಹೇಳುವಂತೆ ಇದು ಸೋಂಕಿನ ಡೆಲ್ಟಾ ರೂಪಾಂತರವಾಗಿದೆ. ಆಕ್ಲೆಂಡ್‍ನ 58 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಲಸಿಕೆ ಪಡೆಯದ ಈತ ದೇಶದ ಉದ್ದ ಅಗಲಕ್ಕೂ ಪ್ರಯಾಣಿಸಿದ್ದಾನೆ ಎಂದು ಆರೋಗ್ಯ ನಿರ್ದೇಶಕ ಆಶ್ಲೇ ಬ್ಲೂಮ್‍ಫೀಲ್ಡ್ ತಿಳಿಸಿದ್ದಾರೆ.

blank

ಮುಂದಿನ ಮೂರು ದಿನಗಳ ಕಾಲ ನ್ಯೂಜಿಲೆಂಡ್‍ನಲ್ಲಿ ಕಟ್ಟು ನಿಟ್ಟಿನ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ನ್ಯೂಜಿಲೆಂಡ್ ಸ್ಥಳೀಯ ಕಾಲಮಾನದಂತೆ ರಾತ್ರಿ 11. 59ರಿಂದ ಲಾಕ್‍ಡೌನ್ ಜಾರಿಯಾಗಲಿದೆ. ಈ ನಾಲ್ಕನೇ ಹಂತದ ಲಾಕ್‍ಡೌನ್ ವೇಳೆ ದೇಶದ ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಅಗತ್ಯ ವಸ್ತುಗಳ ಸೇವೆ ಮತ್ತು ಮೆಡಿಕಲ್, ಸೂಪರ್ ಮಾರ್ಕೆಟ್ ಹೊರತು ಪಡಿಸಿ ಎಲ್ಲಾ ವ್ಯಾಪಾರ, ಉದ್ಯಮಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

blank

ಕೊರೊನಾ ಮೊದಲ ಅಲೆಯಲ್ಲಿ ಸೋಂಕನ್ನು ಮತ್ತೆ ಫೆಬ್ರುವರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಎರಡನೇ ಅಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿತ್ತು. ಆದರೆ ಡೆಲ್ಟಾ ರೂಪಾಂತರದ ಸಾಂಕ್ರಾಮಿಕವನ್ನು ತಡೆಗಟ್ಟಲು ಹಿಂದಿನ ಕ್ರಮಗಳಿಗಿಂತ ಹೆಚ್ಚಿನ ಕಠೀಣ ಕ್ರಮದ ಅಗತ್ಯವಿರುತ್ತದೆ.

Source: publictv.in Source link