‘ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ’- ತಾಲಿಬಾನ್​ನಿಂದ ಸುದ್ದಿಗೋಷ್ಠಿ

‘ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ’- ತಾಲಿಬಾನ್​ನಿಂದ ಸುದ್ದಿಗೋಷ್ಠಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನ ನಡೆಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್.. 20 ವರ್ಷಗಳ ನಿರಂತರ ಹೋರಾಟದಿಂದ ನಾವು ನಮ್ಮ ದೇಶವನ್ನ ವಿಮೋಚನೆಗೊಳಿಸಿದ್ದೇವೆ. ನಮಗೆ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ.. ನಾವು ಐತಿಹಾಸಿಕ ಘಟ್ಟವೊಂದರಲ್ಲಿ ಇದ್ದೇವೆ.

ಅಫ್ಘಾನಿಸ್ತಾನದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡುತ್ತೇವೆ. ನಾವು ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ. ತಾಲಿಬಾನ್​ನ ಉಪ ಸಂಸ್ಥಾಪಕ ಮುಲ್ಲಾಹ್ ಅಬ್ದುಲ್ ಗನಿ ಬರಾದರ್ ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದಾರೆ. ಈ ಹಿಂದೆ ನಮ್ಮ ವಿರುದ್ಧ ಹೋರಾಡಿದವರನ್ನೆಲ್ಲ ನಾವು ಕ್ಷಮಿಸಿದ್ದೇವೆ.

 

Source: newsfirstlive.com Source link