ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಂಧಲೆ ನಡೆಸುತ್ತಿದ್ದಾರೆ. ಆದರೆ ದೇವಸ್ಥಾನದ ಅರ್ಚಕರೊಬ್ಬರು ನಾನು ಕಾಬೂಲ್ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

ಉಗ್ರರ ದುಷ್ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿರುವ ಅಲ್ಪಸಂಖ್ಯಾತರ ಪರಿಸ್ಥಿತಿ ಮಾತ್ರ ಹೇಳ ತೀರದು. ಇಂತಹ ಕಠೋರ ಸ್ಥಿತಿಯಲ್ಲೂ ಅಲ್ಲಿರುವ ಹಿಂದೂ ದೇವಾಲಯ ಒಂದರ ಅರ್ಚಕರೊಬ್ಬರು ತಾವುದೇವರ ಮೇಲೆ ಇಟ್ಟಿರುವ ಸೇವೆ ಹಾಗೂ ನಂಬಿಕೆಯ ಕಾರಣಕ್ಕೆ ಸಖತ್ ಸುದ್ದಿಯಾಗುತ್ತಿದ್ದಾರೆ. ಇದನ್ನೂ ಓದಿ: ಒಂದು ಕೊರೊನಾ ಪ್ರಕರಣ ಪತ್ತೆ- ಮೂರು ದಿನ ಲಾಕ್‍ಡೌನ್

ರಾಜೇಶ್ ಕುಮಾರ್ ಕಾಬೂಲ್‍ನಲ್ಲಿರುವ ದೇಗುಲದ ಒಂದರ ಅರ್ಚಕರಾಗಿ ಸೇವೆ ಅಲ್ಲಿಸುತ್ತಿದ್ದಾರೆ. ಉಗ್ರರ ಕಾಟ ಜೋರಾಗಿದ್ದರೂ ನಾನು ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನವನ್ನು ತೊರೆಯಲ್ಲಿ ಎಂದಿದ್ದಾರೆ. ದೇವರಲ್ಲಿ ನಂಬಿಕೆಯಿಟ್ಟು ಪೂಜೆಯಲ್ಲಿ ನಿಷ್ಠೆಯನ್ನ ಕಂಡಿರುವ ಅವರು ಉಗ್ರರ ದಾಂಧಲೆ ಮಧ್ಯೆಯೂ ಪೂಜೆ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆ

ಪಂಡಿತ್ ರಾಜೇಶ್ ಕುಮಾರ್ ಕಾಬೂಲ್‍ನಲ್ಲಿರುವ ದೇವಾಲಯದ ಅರ್ಚಕರಾರಿಗಿದ್ದಾರೆ. ಕೆಲ ಹಿಂದೂಗಳು ಕಾಬೂಲ್ ತೊರೆಯುವಂತೆ ನನ್ನ ಒತ್ತಾಯಿಸಿದ್ದರೆ. ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಎಲ್ಲಾ ರೀತಿಯ ವ್ಯವೆಸ್ಥೆ ಮಾಡಲು ಮುಂದಾಗಿದ್ದಾರೆ. ಆದರೆ ನಾನು ತಾಲಿಬಾನ್ ತೊರೆಯುವುದಿಲ್ಲ, ನನ್ನ ಕೊಂದರೆ ನಾನು ಅದನ್ನ ನನ್ನ ಸೇವೆಗ ಎಂದು ಪರಿಗಣಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

Source: publictv.in Source link