ಆಗಸ್ಟ್ 30 ರವರೆಗೆ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ- ಕಮಲ್ ಪಂತ್ ಆದೇಶ

ಆಗಸ್ಟ್ 30 ರವರೆಗೆ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ- ಕಮಲ್ ಪಂತ್ ಆದೇಶ

ಬೆಂಗಳೂರು: ಆಗಸ್ಟ್ 30ರವರೆಗೆ ನೈಟ್ ಕರ್ಫ್ಯೂ ವಿಸ್ತರಿಸಿ ನಗರ ಪೊಲೀಸ್ ಆಯುಕ್ತ ಕಮಲ್​ಪಂತ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು ರಾತ್ರಿ 9 ಗಂಟೆಯಿಂದ ನೈಟ್ ಕರ್ಪ್ಯೂ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಆಗಸ್ಟ್ 16 ರಿಂದ ಆಗಸ್ಟ್ 30 ರವರೆಗೆ ನೈಟ್ ಕರ್ಫ್ಯೂವನ್ನ ವಿಸ್ತರಣೆ ಮಾಡಲಾಗಿದೆ.

ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಪ್ಯೂ ಜಾರಿಯಲ್ಲಿ ಇರುತ್ತದೆ. ಏರ್ಪೋರ್ಟ್, ಅಗತ್ಯ ಮೂಲಭೂತ ಸೌಕರ್ಯ, ಸೇವೆ ಸರಬರಾಜಿಗೆ ಅವಕಾಶ ನೀಡಲಾಗಿದೆ. ವೀಕೆಂಡ್ ಕರ್ಪ್ಯೂ ಕೂಡ ಜಾರಿಯಲ್ಲಿ ಇರುತ್ತದೆ ಎಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಮಲ್​ಪಂತ್ ಹೇಳಿಕೆ ನೀಡಿದ್ದಾರೆ.

Source: newsfirstlive.com Source link