ಇಲ್ಲಿ ನಾವು ಸೇಫ್ ಆಗಿದ್ದೇವೆ.. ಆದರೆ ಆಫ್ಘಾನ್​​ನಲ್ಲಿ ಮಹಿಳೆಯರ ಪರಿಸ್ಥಿತಿ ಸರಿ ಇಲ್ಲ -ಕಣ್ಣೀರಿಟ್ಟ ವಿದ್ಯಾರ್ಥಿ

ಇಲ್ಲಿ ನಾವು ಸೇಫ್ ಆಗಿದ್ದೇವೆ.. ಆದರೆ ಆಫ್ಘಾನ್​​ನಲ್ಲಿ ಮಹಿಳೆಯರ ಪರಿಸ್ಥಿತಿ ಸರಿ ಇಲ್ಲ -ಕಣ್ಣೀರಿಟ್ಟ ವಿದ್ಯಾರ್ಥಿ

ತಾಲಿಬಾನಿಗಳ ಕೃತ್ಯಕ್ಕೆ ಇಡೀ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಸದ್ಯ ಭಾರತದಲ್ಲಿ ಸುರಕ್ಷಿತವಾಗಿರುವ ಅಲ್ಲಿನ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲವು ವಿದ್ಯಾರ್ಥಿಗಳಿಗೆ ಅಲ್ಲಿನ ಕಠೋರ ಸ್ಥಿತಿಯನ್ನ ಅವರ ಪೋಷಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರಂತೆ ನಗರದಲ್ಲಿ ನ್ಯೂಸ್​​ಫಸ್ಟ್​ ಜೊತೆ ಮಾತನಾಡಿರುವ ಓರ್ವ ಆಫ್ಘಾನ್ ವಿದ್ಯಾರ್ಥಿ.. ನಾನು ಕಳೆದ ರಾತ್ರಿ ನನ್ನ ಫ್ಯಾಮಿಲಿ ಜೊತೆ ಫೋನಿನಲ್ಲಿ ಮಾತನಾಡಿದೆ. ಅಲ್ಲಿನ ಪರಿಸ್ಥಿತಿ ನಾರ್ಮಲ್ ಆಗಿಲ್ಲ. ಎಲ್ಲವೂ ಸಹಜವಾಗಿಲ್ಲ. ಅದರಲ್ಲೂ ಮಹಿಳೆಯರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಗದ್ಗದಿತರಾದರು.

ಕೇವಲ ಮಹಿಳೆಯರು ಮಾತ್ರವಲ್ಲ, ಅಲ್ಲಿನ ಮೈನಾರಿಟಿಗಳಿಗೂ ತೊಂದರೆಯಾಗಿದೆ. ಸಾಮಾನ್ಯ ನಾಗರಿಕರೆಲ್ಲೂ ತುಂಬಾ ಗಾಬರಿಯಾಗಿದ್ದಾರೆ. ಮಹಿಳೆಯರು ಕೆಲಸ ಮಾಡಲು ಹೋಗುವಂತಿಲ್ಲ. ಆದರೆ ನನ್ನ ಕುಟುಂಬ ಸೇಫ್ ಆಗಿದೆ. ನನ್ನ ತಂದೆ ವಿದ್ಯಾಭ್ಯಾಸದ ಬಗ್ಗೆ ಪೋಕಸ್ ಮಾಡುವಂತೆ ತಿಳಿಸಿದ್ದಾರೆ. ಈ ಬಗ್ಗೆ ಯೋಚನೆ ಮಾಡಬೇಡಿ, ಪರೀಕ್ಷೆ ಬಗ್ಗೆ ಗಮನಕೊಡಿ ಎಂದಿದ್ದಾರೆ. ಆದರೆ ನನಗೆ ಅದು ಆಗುತ್ತಿಲ್ಲ ಎಂದರು.

Source: newsfirstlive.com Source link