ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

ಚೆನ್ನೈ: ಅವಳಿ-ಜವಳಿ ಕಥೆ ಹೇಳಿ ಎರಡನೇ ಮದುವೆಯಾಗಲು ಹೋಗಿ ವರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆದರೆ ಈತ ಇದೀ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿ ರಾಯನ್‍ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಮಗು ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದನು. ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.

ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್‍ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

blank

Jayanth & Victoria, Wedding Ceremony 4/22/12

ಇದರಿಂದ ಸಂಶಯಗೊಂಡ ಯುವತಿ ಪ್ರಶ್ನಿಸಿದಾಗ, ನಕಲಿ ದಾಖಲೆಗಳನ್ನು ಮುಂದಿಟ್ಟಿದ್ದಾನೆ. ಆದರೆ ಆತನ ನಡವಳಿಕೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯುವತಿಗೆ ತನ್ನ ಪ್ರಿಯಕರನ ಅಸಲಿಯತ್ತು ಗೊತ್ತಾಗಿದೆ. ಇದೀಗ ಮೋಸ ಹೋದ ಯುವತಿಯ ಕುಟುಂಬ ನೀಡಿದ ದೂರಿನಂತೆ ಅಡಿ ಪೊಲೀಸರು ರಯಾನ್ ಹಾಗೂ ಆತನ ತಾಯಿ ಸೆಲಿನಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Source: publictv.in Source link