ಭಾರತ ಸರ್ಕಾರ ಯಾಕೆ ತಾಲಿಬಾನ್ ಜೊತೆಗೆ ಈವರೆಗೆ ಮಾತುಕತೆ ನಡೆಸಿಲ್ಲ- ಅಸಾದುದ್ದೀನ್ ಓವೈಸಿ

ಭಾರತ ಸರ್ಕಾರ ಯಾಕೆ ತಾಲಿಬಾನ್ ಜೊತೆಗೆ ಈವರೆಗೆ ಮಾತುಕತೆ ನಡೆಸಿಲ್ಲ- ಅಸಾದುದ್ದೀನ್ ಓವೈಸಿ

ನವದೆಹಲಿ: ಅಫ್ಘಾನಿಸ್ತಾನವನ್ನ ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಾರತ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಿದೆ. ಹೀಗಾಗಿ ತಾಲಿಬಾನ್ ಜೊತೆಗೆ ಕೇಂದ್ರ ಸರ್ಕಾರ ಯಾಕೆ ಮಾತುಕತೆ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ’- ತಾಲಿಬಾನ್​ ಸುದ್ದಿಗೋಷ್ಠಿ

ಲೋಕಸಭೆಯಲ್ಲಿ ಹಲವು ವರ್ಷಗಳ ಹಿಂದೆಯೇ ನಾನು ಕೇಂದ್ರ ಸರ್ಕಾರ ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕಿತ್ತೆಂದು ಹೇಳಿದ್ದೆ. ಈ ವಿಚಾರಕ್ಕೆ ನನ್ನನ್ನ ನಿಂದಿಸಿದರು. ನಾವು ತಾಲಿಬಾನಿಗಳು ಉಗ್ರ ಸಿದ್ಧಾಂತವನ್ನು ಒಪ್ಪುವುದಿಲ್ಲ. ಆದರೆ ತಾಲಿಬಾನ್ ಹೊಂತಿರುಗುತ್ತಿರುವುದನ್ನ ಗೋಡೆ ಮೇಲೆ ಬರೆಯಲಾಗ್ತಿದೆ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಿದ್ದರ ನಂತರ ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡಿದ್ದೇನು..? ಎಂದು ಅಸಾದುದ್ದೀನ್ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: BIG BREAKING: ತಾಲಿಬಾನ್​ಗೆ ಮಣಿಯಲ್ಲ.. ನಾನೇ ಆಫ್ಘನ್ ಅಧ್ಯಕ್ಷ- ಉಪಾಧ್ಯಕ್ಷ ಘೋಷಣೆ

ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ನರೇಂದ್ರ ಮೋದಿಯವರ ಕೊಡುಗೆಯೂ ಇದೆ ಎಂದಿದ್ದಾರೆ.

Source: newsfirstlive.com Source link