ಮೋದಿ ಮಹತ್ವದ ಸಭೆ; ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ಮೋದಿ ಮಹತ್ವದ ಸಭೆ; ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ನವದೆಹಲಿ: ಅಫ್ಘಾನ್​ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ತುರ್ತು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಫ್ಘಾನ್​ನಿಂದ​ ಹಿಂದೂ, ಸಿಖ್ಖರ ಸುರಕ್ಷಿತ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸುರಕ್ಷಿತವಾಗಿ ವಾಪಸ್​ ಕರೆತರಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು ಅಫ್ಘಾನ್​​ ಅಲ್ಪಸಂಖ್ಯಾತರಿಗೆ ಭಾರತ ಸಹಾಯ ಹಸ್ತ ಚಾಚಲಿದೆ ಎಂದು ಮೋದಿ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈ ಶಂಕರ್ ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಅಫ್ಘಾನಿಸ್ತಾನ್ ಅಯೋಮಯ; ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ತುರ್ತು ಸಭೆ

ತಾಲಿಬಾನ್ ಸರ್ಕಾರದ ಜೊತೆಗೆ ಚೀನಾ ಸರ್ಕಾರ ಸ್ನೇಹ ಸಂಬಂಧ ಬೆಳೆಸುವುದಾಗಿ ಹೇಳಿದೆ. ಇನ್ನು ಪಾಕಿಸ್ತಾನದಲ್ಲೂ ಸಾವಿರಾರು ಸಂಖ್ಯೆಯಲ್ಲಿ ತಾಲಿಬಾನಿಗಳು ಐಎಸ್​ಐ ಸಂಘಟನೆಯ ಬಳಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಇದರಿಂದ ಭಾರತದ ಭದ್ರತೆಗೂ ಭವಿಷ್ಯದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆಗಳಿದ್ದು ಈ ವಿಚಾರವಾಗಿಯೂ ಸಹ ಮಹತ್ವದ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗಿದೆ.

Source: newsfirstlive.com Source link