ಮಗು ಉಳಿಸಲು ಬೇಕಿತ್ತು 16 ಕೋಟಿ.. ಸಂಗ್ರಹವಾಗಿದ್ದು 48 ಲಕ್ಷ.. ಸಾಮಾಜಿಕ ಕಾರ್ಯಕ್ಕೆ ಹಣ ಕೊಟ್ಟ ಪೋಷಕರು

ಮಗು ಉಳಿಸಲು ಬೇಕಿತ್ತು 16 ಕೋಟಿ.. ಸಂಗ್ರಹವಾಗಿದ್ದು 48 ಲಕ್ಷ.. ಸಾಮಾಜಿಕ ಕಾರ್ಯಕ್ಕೆ ಹಣ ಕೊಟ್ಟ ಪೋಷಕರು

ಉಡುಪಿ: ಜಗತ್ತಿನ ಅಪರೂಪದ ಸ್ಪೈನಲ್‌ ಮಸ್ಕುಲರ್‌ ಆಟ್ರೋಫಿ ಅಂದ್ರೆ ಬೆನ್ನುಮೂಳೆ ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮಿಥಾನ್ಶ್‌ 2 ವಾರದ ಹಿಂದೆ ಉಸಿರು ಚೆಲ್ಲಿದೆ.

ಜಿಲ್ಲೆಯ ಬೆಳ್ಮನ್‌ ಗ್ರಾಮದ ಈ ಮಿಥಾನ್ಶ್‌ನನ್ನ ಉಳಿಸಿಕೊಳ್ಳೋಕೆ ತಂದೆ ಸಂದೀಪ್‌ ಮತ್ತು ತಾಯಿ ರಜಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಾಕಂದ್ರೆ, ಈ ಮಗುಗೆ ಬೇಕಾಗಿದ್ದುದು 16 ಕೋಟಿ ರೂಪಾಯಿಯ ಇಂಜೆಕ್ಷನ್‌. ಅಷ್ಟು ಹಣ ಇಲ್ಲದಿದ್ದಕ್ಕೆ ಇವ್ರು ಸಾರ್ವಜನಿಕರ ಸಹಾಯ ಕೋರಿದ್ರು. ಆದ್ರೆ, 16 ಕೋಟಿ ರೂಪಾಯಿ ಮಾತ್ರ ಕಲೆಕ್ಟ್‌ ಆಗಲೇ ಇಲ್ಲ. ಆಗಿದ್ದು ಕೇವಲ 48 ಲಕ್ಷ ರೂಪಾಯಿ. ಹಾಗಾದ್ರೆ ಆ 48 ಲಕ್ಷ ರೂಪಾಯಿ ಏನಾಯ್ತು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಮಗುವಿನ ನೆನಪಿಗಾಗಿ ತಂದೆ ತಾಯಿ ಈಗ ಬಂದ 48 ಲಕ್ಷ ರೂಪಾಯಿ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಉಪಯೋಗಿಸುತ್ತಿದ್ದಾರೆ.

ಇನ್ನು ಉಳಿದ ಹಣವನ್ನು ವಿವಿಧ ಕಾರ್ಯಗಳಿಗೆ ಬಳಸುವ ಯೋಚನೆಯಲ್ಲಿದ್ದಾರೆ ಸಂದೀಪ್‌ ಮತ್ತು ರಂಜಿತಾ ದಂಪತಿ. ತನ್ನ ಕರುಳ ಬಳ್ಳಿಯನ್ನು ಉಳಿಸಿಕೊಳ್ಳೋದಕ್ಕೆ ಅಂತಾ ಶತಪ್ರಯತ್ನ ಮಾಡಿದ್ರೂ ಮಗು ಬದುಕುಳಿಯಲಿಲ್ಲ. ಆದ್ರೆ, ಈಗ ಉಸಿರು ನಿಂತ ಬಳಿಕವೂ ಹೆಸರು ಉಳಿಬೇಕು ಅನ್ನೋ ನಿಟ್ಟಿನಲ್ಲಿ ಒಂದೊಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ. ಮಗುವಿನ ನೆನಪಲ್ಲಿ ಸಾರ್ಥಕತೆ ಮೆರೆಯುತ್ತಿದ್ದಾರೆ.

Source: newsfirstlive.com Source link