ಆಂಧ್ರ ಸಿಎಂ ಹೆಸರಲ್ಲಿ ದೇವಸ್ಥಾನ ನಿರ್ಮಿಸಿದ ಶಾಸಕ.. ಮೋದಿ ಕೊಡುಗೆ ಸ್ಮರಿಸಿ ದೇವಾಲಯ ನಿರ್ಮಾಣ

ಆಂಧ್ರ ಸಿಎಂ ಹೆಸರಲ್ಲಿ ದೇವಸ್ಥಾನ ನಿರ್ಮಿಸಿದ ಶಾಸಕ.. ಮೋದಿ ಕೊಡುಗೆ ಸ್ಮರಿಸಿ ದೇವಾಲಯ ನಿರ್ಮಾಣ

ಭಕ್ತರು, ಬೆಂಬಗಲಿಗರು, ಕಾರ್ಯಕರ್ತರು ತಮ್ಮ ಇಷ್ಟವಾದ ವ್ಯಕ್ತಿಗಳು ಕೆಲುವೊಮ್ಮೆ ಸಿಕ್ಕಪಟ್ಟೆ ಇಷ್ಟ ಪಡುತ್ತಾರೆ. ಇಷ್ಟ ಪಟ್ಟು, ಪುತ್ಥಳಿಯೋ, ವಿಗ್ರಹವೋ ನಿರ್ಮಾಣ ಮಾಡ್ತಾರೆ. ಇದೇ ರೀತಿ ಆಂಧ್ರಪ್ರದೇಶದ ಶಾಸಕರೊಬ್ಬರು ಸಿಎಂ ಜಗನ್​​ಮೋಹನ್​ ರೆಡ್ಡಿ ಮೇಲಿನ ಅಭಿಮಾನಕ್ಕೆ ದೇವಸ್ಥಾನ ಮತ್ತೆ ಮ್ಯೂಸಿಯಂನ್ನ ನಿರ್ಮಿಸಿದ್ದಾರೆ.

ಹೌದೂ, ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ಜಗನ್​ ಮೋಹನ್​ರೆಡ್ಡಿಯವರ ದೇವಸ್ಥಾನವನ್ನ ಸಿರ್ಕಲಹಸ್ತದ ಬಿಯಾಪು ಮಧುಸೂದನ್ ರೆಡ್ಡಿಯವರು ನಿರ್ಮಿಸಿದ್ದಾರೆ. ದೇವಸ್ಥಾನ ಗಾಜಿನ ಸಭಾಂಗಣವನ್ನು ಹೊಂದಿದೆ. ಸಿಎಂ ಜಗನ್​​ ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಪ್ರತಿಬಿಂಬಿಸುವಂತೆ ‘ನವರತ್ನಾಲು’ ಅಂತ ಹೇಳಿ, ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶ್ರೀಕಾಲಹಸ್ತಿಯಲ್ಲಿರುವ ದೇವಸ್ಥಾನ-ಕಮ್-ಮ್ಯೂಸಿಯಂ ಆಂಧ್ರಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಪ್ರತಿನಿಧಿಸುತ್ತವೆ.

blank

ಇತ್ತ, ಪ್ರಧಾನಿ ಮೋದಿಯವರಿಗೂ ಪುಣೆಯ ಬಿಜೆಪಿ ಕಾರ್ಯಕರ್ತ ಮಯೂರ್​ ಮುಂಡೆ ಎನ್ನುವವರು, ಮೋದಿಜಿರವರಿಗೆ ದೇವಸ್ಥಾನವನ್ನ ಕಟ್ಟಿಸಿದ್ದಾರೆ. ಅಲ್ಲದೇ, ಮೋದಿಯವರು, ಪ್ರಧಾನ ಮಂತ್ರಿಯಾದಾಗಿನಿಂದ ಸಾಕಷ್ಟು ಕೆಲಸಗಳು ಭಾರತಕ್ಕೋಸ್ಕರ ಮಾಡಿದ್ದಾರೆ.ಅಷ್ಟೇ ಅಲ್ಲ, ರಾಮಮಂದಿರ ನಿರ್ಮಾಣವನ್ನು ಅವ್ರು ಮಾಡುತ್ತಿದ್ದಾರೆ ಹೀಗಾಗಿ, ಅವರೊಗೊಂದು ದೇವಸ್ಥಾನ ಸಮರ್ಪಣೆ  ಅಂತ ಹೇಳಿದ್ದಾರೆ.

Source: newsfirstlive.com Source link