ಹಿಂದೊಮ್ಮೆ ಕ್ರಿಕೆಟ್ ಸ್ಟೇಡಿಯಂ.. ಈಗ ತರಕಾರಿ ಬೆಳೆಯುವ ಜಮೀನು- ಪಾಕ್​ ಕ್ರಿಕೆಟ್ ಪ್ರೇಮ ಇದೇನಾ?

ಹಿಂದೊಮ್ಮೆ ಕ್ರಿಕೆಟ್ ಸ್ಟೇಡಿಯಂ.. ಈಗ ತರಕಾರಿ ಬೆಳೆಯುವ ಜಮೀನು- ಪಾಕ್​ ಕ್ರಿಕೆಟ್ ಪ್ರೇಮ ಇದೇನಾ?

ಪಾಕಿಸ್ತಾನದಲ್ಲಿ ಜನರು ಕ್ರಿಕೆಟ್ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರಂತೆ. ಹಿಂದೊಮ್ಮೆ ದೊಡ್ಡಮಟ್ಟದ ಕ್ರಿಕೆಟ್​ ಅಂಬಾಸಿಡರ್​ಗಳನ್ನು ಹೊಂದಿದ್ದ ಪಾಕ್​ನಲ್ಲಿ ಇದೀಗ ಮೂಲಭೂತ ಹಕ್ಕುಗಳಿಗೂ ಸಂಕಷ್ಟಪಡುವಂತಾಗಿದೆ ಎನ್ನಲಾಗಿದೆ. ಇಂಥದ್ದೊಂದು ಚರ್ಚೆ ಮುನ್ನೆಲೆಗೆ ಬರಲು ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ವಿಡಿಯೋ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ವಿಡಿಯೋದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಸ್ಟೇಡಿಯಂ ಇದೀಗ ಕುಂಬಳಕಾಯಿ ಹಾಗೂ ಮೆಣಸಿನ ಕಾಯಿ ಬೆಳೆಯುವ ಭೂಮಿಯಾಗಿ ಪರಿವರ್ತನೆಗೊಂಡಿರೋದನ್ನ ಕಾಣಬಹುದಾಗಿದೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ ಖಾನೆವಾಲ್ ಸ್ಟೇಡಿಯಂನಲ್ಲಿ ಸ್ಥಳೀಯ ಕ್ರಿಕೆಟ್ ಮ್ಯಾಚ್​ಗಳನ್ನ ನಡೆಸಲಾಗ್ತಾ ಇತ್ತು.

ಪಾಕಿಸ್ತಾನದಲ್ಲಿ ತಳಮಟ್ಟದಿಂದ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು ಎನ್ನಲಾಗಿದೆ. ಈ ಕ್ರೀಡಾಂಗಣದಲ್ಲಿ ಒಂದು ಕಾಲದಲ್ಲಿ ಉನ್ನತ ಮಟ್ಟದ ಸೌಲಭ್ಯಗಳು, ಪ್ರಾಕ್ಟೀಸ್ ಏರಿಯಾ ಹಾಗೂ ಪೆವಿಲಿಯನ್ ನಿರ್ಮಿಸಲಾಗಿತ್ತು. ಸದ್ಯ ಈ ಸ್ಟೇಡಿಯಂ ಈಗ ರೈತರ ಪಾಲಾಗಿದ್ದು ರೈತರು ಈ ಸ್ಟೇಡಿಯಂ ಜಮೀನಿನಲ್ಲಿ ಈಗ ಕುಂಬಳಕಾಯಿ ಹಾಗೂ ಮೆಣಸಿನ ಕಾಯಿ ಬೆಳೆ ಬೆಳೆಯುತ್ತಿದ್ದಾರೆ. ಈ ಸ್ಟೇಡಿಯಂಗೆ ಕೋಟ್ಯಂತರ ರೂ ಹಣ ಖರ್ಚು ಮಾಡಿ ನಿರ್ಮಿಸಲಾಗಿತ್ತಂತೆ.

ಇನ್ನು ಈ ವಿಡಿಯೋಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಹಾಗೂ ಕ್ರಿಕೆಟಿಗ ಯಾಸೀರ್ ಹಮೀದ್ ಇದನ್ನು ನೋಡಲು ಬೇಸರವಾಗುತ್ತದೆ ಎಂದು ಕಮೆಂಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Source: newsfirstlive.com Source link