ಮತ್ತೆ ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ಸಿನಿಮಾ.. ಯಾವಾಗ ಗೊತ್ತಾ..?

ಮತ್ತೆ ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ಸಿನಿಮಾ.. ಯಾವಾಗ ಗೊತ್ತಾ..?

‘‘ನೀ ಸಿಗೋವರೆಗೂ’’ ಇದು ಕನ್ನಡ ಹ್ಯಾಟ್ರಿಕ್​ ಹೀರೊ ಡಾ.ಶಿವ ರಾಜ್​ಕುಮಾರ್​ ಅವರ 124ನೇ ಸಿನಿಮಾದ ಟೈಟಲ್. ಇಂದು ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಇನ್ನು ವಿಶೇಷ ಅಂದ್ರೆ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ರು.

blank

ಇದೀಗ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಶಿವಣ್ಣ, ಅಭಿಮಾನಿಗಳ ಮತ್ತೊಂದು ಆಸೆಯನ್ನ ಈಡೇರಿಸುವ ಭರವಸೆಯನ್ನ ನೀಡಿದ್ದಾರೆ. ಅದೇನು ಅಂದ್ರೆ ವಿಲನ್ ಚಿತ್ರದ ಬಳಿಕ ಮತ್ತೆ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳಬೇಕು ಅಂತಾ ಅಭಿಮಾನಿಗಳು ಒತ್ತಾಯಿಸುತ್ತಿದ್ದರು.

ಈ ಬಗ್ಗೆ ನ್ಯೂಸ್​ಫಸ್ಟ್​ ಶಿವಣ್ಣರನ್ನ ಕೇಳಿದಾಗ ಖಂಡಿತ ಮಾಡುತ್ತೀವಿ. ಸದ್ಯ ಅವರಿಗೆ ಅವರದ್ದೇ ಆದ ಕಮೀಟ್​ಮೆಂಟ್ ಇದೆ. ಬಹುಶಃ 2022ರ ಅಂತ್ಯದ ವೇಳೆಗೆ ನಾವಿಬ್ಬರೂ ಒಟ್ಟಿಗೆ ನಟಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

Source: newsfirstlive.com Source link