ಕೋಟೆನಾಡಿನಲ್ಲಿ ಸದ್ದು ಮಾಡಿದ ಪಿಸ್ತೂಲ್ -ಬಟ್ಟೆ ಕೊಳ್ಳುವ ನೆಪದಲ್ಲಿ ವ್ಯಾಪಾರಿಯ ಹತ್ಯೆ

ಕೋಟೆನಾಡಿನಲ್ಲಿ ಸದ್ದು ಮಾಡಿದ ಪಿಸ್ತೂಲ್ -ಬಟ್ಟೆ ಕೊಳ್ಳುವ ನೆಪದಲ್ಲಿ ವ್ಯಾಪಾರಿಯ ಹತ್ಯೆ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ರಾತ್ರೋ ರಾತ್ರಿ ಗುಂಡಿನ ದಾಳಿ ನಡೆದಿದೆ. ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿ ಸುಪಾರಿ ಕಿಲ್ಲರ್​ಗಳು ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಮೃತ ವ್ಯಕ್ತಿ ಹೊಳಲ್ಕೆರೆ ಪಟ್ಟಣದ ಪ್ರಿಯದರ್ಶಿನಿ ಬಟ್ಟೆ ಅಂಗಡಿ ಮಾಲೀಕ ಮೂಲಸಿಂಗ್​ ಅಂತ ತಿಳಿದುಬಂದಿದೆ. ರಾತ್ರಿ ಬಟ್ಟೆ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದು ಹತ್ಯೆ ಮಾಡಿದ್ದಾರೆ ಅಂತ ಪೊಲೀಸರು ಶಂಕಿಸಿದ್ದಾರೆ.

ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು, ಶೂಟ್​ ಮಾಡಿರುವ ಶಂಕೆಯ ಮೇಲೆ ತನಿಖೆ ಆರಂಭ ಮಾಡಿದ್ದಾಗಿ ತಿಳಿಸಿದ್ದಾರೆ. ಹೊಸದುರ್ಗದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದ್ದು, ಘಟನೆಯಿಂದ ಹೊಳಲ್ಕೆರೆ ಜನರಲ್ಲಿ ಆತಂಕ ಮನೆ ಮಾಡಿದೆ.

Source: newsfirstlive.com Source link