ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಫೈಟರ್​ಗಳಿಗೆ ಇನ್ಸುರೆನ್ಸ್ ಕಡ್ಡಾಯ

ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಫೈಟರ್​ಗಳಿಗೆ ಇನ್ಸುರೆನ್ಸ್ ಕಡ್ಡಾಯ

ಬೆಂಗಳೂರು: ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ಸಾಹಸ ಕಲಾವಿದ ವಿದ್ಯುತ್​ ತಂತಿ ತಗುಲಿ ಮೃತಪಟ್ಟ ಪ್ರಕರಣ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಹತ್ವದ ಸುದ್ದಿಗೋಷ್ಠಿ ನಡೆಸಿದೆ.

ಇನ್ಮುಂದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಫೈಟರ್ ಗಳಿಗೆ ಸೇರಿ ಎಲ್ಲಾ ವಿಭಾಗದ ಕಾರ್ಮಿಕರಿಗೆ ಇನ್ಷ್ಯುರೆನ್ಸ್ ಕಡ್ಡಾಯ ಮಾಡಿದೆ. ಅಲ್ಲದೆ ಇನ್ಸ್ಯುರೆನ್ಸ್ ಇರೋ ಕಾರ್ಮಿಕರನ್ನ ಮಾತ್ರ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಬೇಕು ಅಂತಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸೂಚನೆ ನೀಡಿದೆ.

ಇನ್ನು ಸಾಹಸ ದೃಶ್ಯದ ಶೂಟಿಂಗ್​ ಸಮಯದಲ್ಲಿ ಆ್ಯಂಬುಲೆನ್ಸ್​, ಡಾಕ್ಟರ್​, ನರ್ಸ್​, ಪ್ರಥಮ ಚಿಕಿತ್ಸಾ ಸೌಲಭ್ಯವಿರಬೇಕು. ಚಿತ್ರೀಕರಣದಲ್ಲಿ ಪಾಲ್ಗೊಳ್ಳೊ ಎಲ್ಲರಿಗೂ ನಿರ್ಮಾಪಕರು ಗ್ರೂಪ್​ ಇನ್ಸುರೆನ್ಸ್​ ಮಾಡಿಸಬೇಕು. ಇನ್ನು ಶೂಟಿಂಗ್ ನಲ್ಲಿ ಪಾಲ್ಗೊಳ್ಳೊ ಫೈಟರ್ಸ್, ಕಾರ್ಮಿಕರು ಸ್ವಯಂ‌ಪ್ರೇರಿತವಾಗಿ ಒಪ್ಪಿದ ಪತ್ರಕ್ಕೆ ಸಹಿ ಹಾಕಿ ಶೂಟಿಂಗ್​​ಗೆ ಬರಬೇಕು. ಒಂದು ವೇಳೆ ಚಿತ್ರೀಕರಣ ಸ್ಥಳದಲ್ಲಿ ಯಾವುದೇ ಘಟನೆ ಆದರೆ ಆಯಾ ಸಂಘದ ಮುಖ್ಯಸ್ಥರೇ ನೇರ ಹೊಣೆ ಅಂತಾ ಫಿಲ್ಮ್ ಚೇಂಬರ್ ಹೇಳಿದೆ.

Source: newsfirstlive.com Source link