‘ಈಗ ಯಾವ ಚುನಾವಣೆಯೂ ಇಲ್ಲ, ಪ್ರಚಾರಕ್ಕಾಗಿ ಯಾತ್ರೆ ಮಾಡುತ್ತಿಲ್ಲ’ -ಶೋಭಾ ಕರಂದ್ಲಾಜೆ

‘ಈಗ ಯಾವ ಚುನಾವಣೆಯೂ ಇಲ್ಲ, ಪ್ರಚಾರಕ್ಕಾಗಿ ಯಾತ್ರೆ ಮಾಡುತ್ತಿಲ್ಲ’ -ಶೋಭಾ ಕರಂದ್ಲಾಜೆ

ಹಾಸನ: ಬಿಜೆಪಿಯ ಜನಾಶೀರ್ವಾದ ಯಾತ್ರೆಯ ಬಗ್ಗೆ ಹಾಸನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದಾರೆ. ಇಂತಹ ಯಾತ್ರೆಗಳು ಚುನಾವಣೆ ಬಂದಾಗ ಮಾತ್ರ ನಡೆಯುತ್ತೆ. ಆದ್ರೆ ಈಗ ಯಾವ ಚುನಾವಣೆಯೂ ಇಲ್ಲ. ಅಥವಾ ಚುನಾವಣಾ ಪ್ರಚಾರಕ್ಕಾಗಿ ಈ ಯಾತ್ರೆ ಮಾಡ್ತಾ ಇಲ್ಲ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ನಮ್ಮ ಪರಿಚಯ ಮಾಡಿಕೊಳ್ಳಲು ಪ್ರಧಾನಿಗಳು ತಿಳಿಸಿದ್ರು. ಆದ್ರೆ ವಿಪಕ್ಷಗಳ ಪುಂಡಾಟದಿಂದ ಪಾರ್ಲಿಮೆಂಟ್​ನಲ್ಲಿ ಪರಿಚಯ ಮಾಡಿಕೊಳ್ಳಲು ಆಗಲಿಲ್ಲ. ಹಾಗಾಗಿ ದೇಶದ ಜನರ ಮುಂದೆ ಪರಿಚಯ ಮಾಡಿಕೊಳ್ಳಲು ಜನಾಶೀರ್ವಾದ ಯಾತ್ರೆ ಮಾಡುತ್ತಾ ಇದ್ದೀವಿ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ರು.

ಪ್ರಜಾತಂತ್ರ ವ್ಯವಸ್ಥೆ ಮಾರಕವಾಗುವ ರೀತಿಯಲ್ಲಿ ವಿರೋಧ ಪಕ್ಷಗಳು ನಡೆದುಕೊಳ್ಳುತ್ತಿವೆ. ಫೆಗಾಸಿಸ್​​​ಗೂ ನಮಗೂ ಸಂಬಂಧವಿಲ್ಲ. ಫೆಗಾಸಿಸ್​​ಗೂ ಹಾಸನದ ರೈತರಿಗೂ ಏನ್ ಸಂಬಂಧ.. ರೈತರ ಸಮಸ್ಯೆಗಳನ್ನು ಚರ್ಚೆ ನಡೆಸುತ್ತಿಲ್ಲ. ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಲುಕೊಳ್ಳುವ ವೇದಿಕೆ ಅದು. ಆದರೆ ಯಾವುದೂ ಚರ್ಚೆ ಆಗುತ್ತಿಲ್ಲ. ಈ ಕ್ಷೇತ್ರದಿಂದ ಸಂಸದರನ್ನು ಕೊಟ್ಟಿಲ್ಲ. ಆದರೆ ರಾಜ್ಯದಿಂದ 25 ಜನ ಸಂಸದರು ಹೋಗಿದ್ದೇವೆ. ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ಪ್ರಧಾನಿಯವರು ಸರ್ಕಾರ ನಡೆಸುತ್ತಿದ್ದಾರೆ.

ಅಪವಾದಗಳ ಮಧ್ಯೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ದಿನದ 18 ಗಂಟೆ ದೇಶಕ್ಕೆ ಕೆಲಸ ಮಾಡುತ್ತಿದ್ದಾರೆ. ಗಡಿಗಳ ರಕ್ಷಣೆ, ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ‌ ಕೆಲಸ ಮಾಡುತ್ತಿದ್ದಾರೆ. ವಿದೇಶದಲ್ಲಿ ಗೌರವ ಕೊಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶದಲ್ಲಿ ಅವರಿಗೆ ಗೌರವ ಸಿಕ್ಕರೆ ಈಡೀ ದೇಶಕ್ಕೆ ಸಿಗೋ ಗೌರವ. ವಿದೇಶಕ್ಕೆ ಹೋದ್ರೆ ನಮ್ಮ ಪ್ರಧಾನಿ ಏನ್ ಮಾತಾಡ್ತಾರೆ ಎಂತಾ ಕುತೂಹಲದಿಂದ ಕಾಯ್ತಾರೆ.. ಆಹಾರ ಪದಾರ್ಥಗಳನ್ನು ಭಾರತ ರಫ್ತು ಮಾಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಳೆದ ವರ್ಷ ನಮ್ಮ ದೇಶದ ಆಹಾರ ಉತ್ಪಾದನೆ 305 ಮೆಟ್ರಿಕ್ ಟನ್. ಇದರ ಹಿಂದೆ ರೈತರ ಶ್ರಮ ಇದೆ ಹಾಗೂ ಹಲವಾರು ಯೋಜನೆಗಳಿವೆ. ಕಳೆದ ಆರೇಳು ವರ್ಷದಲ್ಲಿ ಶೇಕಡಾ 20.22 ರಷ್ಟು ನಮ್ಮ ರೈತರು ದೇಶದ ಆಹಾರ ಉತ್ಪಾದನೆಗೆ ನೀಡುತ್ತಿದ್ದಾರೆ.

ಹಿಂದೆ 21 ಸಾವಿರ ಕೃಷಿಯ ಬಜೆಟ್ ಇತ್ತು, ಈಗ ಒಂದು ಲಕ್ಷದ ಮೂವತ್ತು ಸಾವಿರ ಕೋಟಿ‌ ಬಜೆಟ್ ಪ್ರಧಾನಿಯವರು ನೀಡಿದ್ದಾರೆ. ಬೆಳೆ ನಷ್ಟವಾದರೆ ಬನ್ನಿ‌ ಸರ್ವೇ ಮಾಡಿ ಅಂತಾ ಅಧಿಕಾರಿಗಳ‌ ಬಳಿ ಹೋಗಬೇಕಿತ್ತು. ಈಗ ನೀವೇ ಫೋಟೋ ತೆಗೆದು ನೇರವಾಗಿ ಫಸಲ್ ಭೀಮಾ ಯೋಜನೆ‌ಯ ಮೂಲಕ ಪರಿಹಾರ ಸಿಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಆರು ಸಾವಿರ, ರಾಜ್ಯ ಸರ್ಕಾರ ನಾಲ್ಕು ಸಾವಿರ ನೀಡುತ್ತಿದ್ದಾರೆ. ಒಂದು‌ ದೊಡ್ಡ ರಾಜ್ಯದ ಬಜೆಟ್ ನಷ್ಟು ಹಣವನ್ನು ಕಿಸಾನ್ ಸಮ್ಮಾನ್ ಯೋಜನೆ ಎಂದು ವಿವರಿಸಿದರು.

Source: newsfirstlive.com Source link