ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇಸ್ಲಾಂ ರಾಷ್ಟ್ರ ಸ್ಥಾಪನೆಗೆ ಮುಂದಾಗುತ್ತೇವೆ ಎಂದು ತಾಲಿಬಾನ್ ಅಧಿಕೃತವಾಗಿ ಹೇಳಿದೆ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ತಾಲಿಬಾನಿಗಳ ಆಡಳಿತ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ ತಾಲಿಬಾನ್ ತಾನು ಬದಲಾಗಿದ್ದು, ಎಲ್ಲರನ್ನೂ ಕ್ಷಮಿಸಿದ್ದಾಗಿ ಹೇಳಿಕೊಂಡಿದೆ.

ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹೀದ್ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾನೆ. ಆದರೆ ಅದು ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ ಎಂದು ಸ್ಪಷ್ಟಪಡಿಸಿದ್ದಾನೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

ತಾಲಿಬಾನ್ ಹೇಳಿದ್ದು ಏನು?
ಆರೋಗ್ಯ ಕೇತ್ರ ಮತ್ತು ಇತರೆ ಕ್ಷೇತ್ರದಲ್ಲಿ ಮಹಿಳೆಯರು ಕೆಲಸ ಮಾಡಬಹುದು. ಮಹಿಳೆಯರ ವಿರುದ್ಧ ನಾವು ಕ್ರಮಕೈಗೊಳ್ಳುವುದಿಲ್ಲ. ಅಫ್ಘಾನ್ ನೆಲವನ್ನು ಬೇರೆ ರಾಷ್ಟ್ರದ ವಿರುದ್ಧದ ಚಟುವಟಿಕೆಗೆ ಬಳಸಲು ಬಿಡುವುದಿಲ್ಲ. ಅಫ್ಘಾನ್ ಮಾದಕ ದ್ರವ್ಯ ಬೆಳೆಸುವ ರಾಷ್ಟ್ರವಾಗಿರಲ್ಲ.

ಈ ಮೊದಲು ಇದ್ದ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ನಾವು ಭ್ರಷ್ಟಾಚಾರ ಎಸಗಲು ಬಿಡುವುದಿಲ್ಲ. ಈ ಮೊದಲಿನ ಸರ್ಕಾರದ ಜೊತೆ ಕೈ ಜೋಡಿಸಿದವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಎಲ್ಲರನ್ನೂ ಕ್ಷಮಿಸಿದ್ದೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

Source: publictv.in Source link