ತನ್ನದಲ್ಲದ ತಪ್ಪಿಗೆ ಸೌದಿಯಲ್ಲಿ ಜೈಲು ಸೇರಿದ್ದ ಹರೀಶ್​ ಬಂಗೇರ 2 ವರ್ಷಗಳ ಬಳಿಕ ತವರಿಗೆ ವಾಪಸ್​

ತನ್ನದಲ್ಲದ ತಪ್ಪಿಗೆ ಸೌದಿಯಲ್ಲಿ ಜೈಲು ಸೇರಿದ್ದ ಹರೀಶ್​ ಬಂಗೇರ 2 ವರ್ಷಗಳ ಬಳಿಕ ತವರಿಗೆ ವಾಪಸ್​

ಉಡುಪಿ: ತನ್ನ ಹೆಸರಿನಲ್ಲಿ ದುಷ್ಕರ್ಮಿಗಳು ಫೇಸ್​​ಬುಕ್​ ಖಾತೆ ತೆರೆದು ಸೌದಿ ಅರೇಬಿಯಾ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನ ಮಾಡಿ ಪೋಸ್ಟ್​​ ಮಾಡಿದ್ದ ಕಾರಣ ಜೈಲು ಸೇರಿದ್ದ ಕುಂದಾಪುರ ಬೀಜಾಡಿಯ ಹರೀಶ್ ಬಂಗೇರ ಇಂದು ತವರಿಗೆ ವಾಪಸ್​ ಆಗಿದ್ದಾರೆ.

ಎರಡು ವರ್ಷಗಳ ಬಳಿಕ ಸೌದಿ ಜೈಲಿನಿಂದ ಬಿಡುಗಡೆಗೊಂಡು ಹರೀಶ್ ಬಂಗೇರ ತಾಯ್ನಾಡಿಗೆ ಮರಳಿದ್ದು, ಬೆಂಗಳೂರು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದರು. ಹರೀಶ್ ಬಂಗೇರ ಅವರನ್ನು ಕುಟುಂಬಸ್ಥರು ಸ್ವಾಗತಿಸಿ ಬರಮಾಡಿಕೊಂಡರು.

blank

ಏನಿದು ಪ್ರಕರಣ..?
ಹರೀಶ್ ಬಂಗೇರ ಹೆಸರಿನ ನಕಲಿ ಫೇಸ್​​ಬುಕ್ ಖಾತೆಯಿಂದ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2019ರ ಡಿಸೆಂಬರ್​ನಲ್ಲಿ ಸೌದಿ ಪೊಲೀಸರು ಹರೀಶ್ ಬಂಗೇರ ಅವರನ್ನು ಬಂಧನ ಮಾಡಿದ್ದರು. ಅಂದಹಾಗೇ, ಎಸಿ ಮೆಕಾನಿಕ್ ಆಗಿರುವ ಹರೀಶ್ ಅವರು ಮೂರು ವರ್ಷಗಳ ಹಿಂದೆ ಸೌದಿಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಉಡುಪಿ ಸೆನ್ ಠಾಣೆಯಲ್ಲಿ ನಕಲಿ ಫೇಸ್​ಬುಕ್​ ಖಾತೆ ತೆರೆದ ಬಗ್ಗೆ ಹರೀಶ್​ ಕುಟುಂಸ್ಥರು ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಸಂದರ್ಭದಲ್ಲಿ ಮೂಡಬಿದಿರೆ ಮೂಲದ ಮುಸ್ಲಿಂ ಸಹೋದರರು ನಕಲಿ ಖಾತೆ ತೆಗೆದು ಅವಹೇಳನಕಾರಿ ಪೋಸ್ಟ್ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಕೇಂದ್ರ ಸಚಿವಾಲಯದ ಮೂಲಕ ಪ್ರಕರಣದ ಕುರಿತು ಸೌದಿ ಅಧಿಕಾರಗಳ ಜೊತೆ ನಿರಂತರ ಮಾತುಕತೆ ನಡೆಸಿ ಹರೀಶ್ ಬಂಗೇರ ಅವರ ಬಿಡುಗಡೆಗೆ ಬೇಕಾದ ಕಾರ್ಯಗಳನ್ನು ಮಾಡಲಾಗಿತ್ತು.

Source: newsfirstlive.com Source link