ತಮಿಳುನಾಡಿನ ಜನಪ್ರಿಯ ನಟ ನಿಧನ; ಕಂಬನಿ ಮಿಡಿದ ಗಣ್ಯರು

ತಮಿಳುನಾಡಿನ ಜನಪ್ರಿಯ ನಟ ನಿಧನ; ಕಂಬನಿ ಮಿಡಿದ ಗಣ್ಯರು

ನವದೆಹಲಿ: ತಮಿಳುನಾಡಿನ ಜನಪ್ರಿಯ ನಟ ಹಾಗೂ ನಿರೂಪಕ ಆನಂದ್​ ಕಣ್ಣನ್ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ನಿಧನರಾಗಿದ್ದಾರೆ.

ಆನಂದ್ ಕಣ್ಣನ್ ಅವರಿಗೆ 48 ವರ್ಷವಾಗಿತ್ತು. ಆನಂದ ಕಣ್ಣನ್ 1990 ರಿಂದ 2000 ವರೆಗೆ ಟಿವಿ ಆ್ಯಂಕರಿಂಗ್​ನಲ್ಲಿ ತಮ್ಮದೇ ಆದ ಶೈಲಿ ಮೂಲಕ ಜನರ ಮನಗೆದ್ದು ಜನಪ್ರಿಯತೆಯನ್ನ ಗಿಟ್ಟಿಸಿಕೊಂಡಿದ್ದರು. ವೆಂಕಟ್​ ಪ್ರಭುವ ಅವರ ಸರೋಜ ಚಿತ್ರದಲ್ಲಿ ಆನಂದ್ ನಟಿಸಿ ಖ್ಯಾತಿ ಗಳಿಸಿದ್ದರು. ಇವರ ಅಗಲಿಕೆಗೆ ದಕ್ಷಿಣದ ಸೆಲೆಬ್ರಿಟಿಗಳು ಟ್ವಿಟರ್​ನಲ್ಲಿ ಕಂಬನಿ ಮಿಡಿದಿದ್ದಾರೆ.

Source: newsfirstlive.com Source link