T-20 ವಿಶ್ವಕಪ್​ಗೆ ಸದ್ದಿಲ್ಲದೇ ಶುರುವಾಯ್ತು ಸಿದ್ಧತೆ -ಯಾರಿಗೆ ಸಿಗಲಿದೆ ಸ್ಥಾನ? ಯಾರಿಗೆ ಕೊಕ್?

T-20 ವಿಶ್ವಕಪ್​ಗೆ ಸದ್ದಿಲ್ಲದೇ ಶುರುವಾಯ್ತು ಸಿದ್ಧತೆ -ಯಾರಿಗೆ ಸಿಗಲಿದೆ ಸ್ಥಾನ? ಯಾರಿಗೆ ಕೊಕ್?

ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿ ಜೊತೆ ಜೊತೆಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಸಿದ್ಧತೆಗಳು ಭರದಿಂದ ನಡೆದಿವೆ. ಈ ಎರಡೂ ಮಹತ್ವದ ಟೂರ್ನಿಗೆ ಆಟಗಾರರು, ಫ್ರಾಂಚೈಸಿಗಳು, ಬಿಸಿಸಿಐ ಸಿದ್ಧತೆ ನಡೆಸ್ತಾ ಇದ್ರೆ, ಸೆಲೆಕ್ಷನ್​ ಕಮಿಟಿ ವಿಶ್ವಕಪ್​ ಟೂರ್ನಿಗೆ ಅಂತಿಮ ಟಚ್ ನೀಡೋ ತವಕದಲ್ಲಿದೆ.

ಸದ್ಯ ನಡೀತಾ ಇರೋ ಇಂಡೋ -ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿ ಕ್ರಿಕೆಟ್​ ಲೋಕದ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿ ಮಾರ್ಪಟ್ಟಿದೆ. ಈ ಸರಣಿಯ ಸೋಲು-ಗೆಲುವು ಮುಂತಾದ ಲೆಕ್ಕಾಚಾರಗಳ ನಡುವೆಯೇ, ಐಪಿಎಲ್​ ಸಿದ್ಧತೆಯೂ ಕ್ರಿಕೆಟ್​ ಲೋಕದಲ್ಲಿ ಸದ್ದು ಮಾಡ್ತಿದೆ. ಆದ್ರೆ, ಇದೆಲ್ಲದರ ನಡುವೇ ಸದ್ದಿಲ್ಲದೇ ಮಹತ್ವದ ಟಿ20 ವಿಶ್ವಕಪ್​ ತಂಡವನ್ನ ಆಯ್ಕೆ ಮಾಡೋಕೆ ಆಯ್ಕೆ ಸಮಿತಿ ನಿರ್ಧರಿಸಿದೆ.

blank

ಸೆಪ್ಟೆಂಬರ್​ ಮೊದಲ ವಾರದಲ್ಲಿ ಸೆಲೆಕ್ಷನ್​ ಕಮಿಟಿಯ ಮಹತ್ವದ ಸಭೆ
15 ಜನರ ತಂಡದ ಆಯ್ಕೆ ಮುಂದಾದ ಸೆಲೆಕ್ಷನ್​ ಕಮಿಟಿ
ಯೆಸ್.. 2ನೇ ಹಂತದ ಐಪಿಎಲ್​ ಮುಗಿದ ಬೆನ್ನಲ್ಲೇ ಆರಂಭವಾಗಲಿರೋ, ವಿಶ್ವಕಪ್​ ಸಮರಕ್ಕೆ ತಂಡವನ್ನ ಆಯ್ಕೆ ಮಾಡೋಕೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್​ ಮೊದಲ ವಾರದಲ್ಲಿ ಆಯ್ಕೆ ಸಮಿತಿಯ ಸದಸ್ಯರು ಸಭೆ ಸೇರಲಿದ್ದು 15 ಜನರ ತಂಡವನ್ನ ಆಯ್ಕೆ ಮಾಡಲಾಗುತ್ತೆ ಎಂಬ ಮಾಹಿತಿ ಈಗ ಹೊರ ಬಿದ್ದಿದೆ. ಇದು ಐಪಿಎಲ್​ನಲ್ಲಿ ನೀಡೋ ಪ್ರದರ್ಶನದ ಆಧಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ಆಘಾತ ತಂದಿದೆ.​

ತಂಡದ ಆಯ್ಕೆಗೆ ಐಪಿಎಲ್​ ಪ್ರದರ್ಶನ ಮಾನದಂಡ ಅಲ್ಲವೇ ಅಲ್ಲ!
ಧವನ್​ ನೇತೃತ್ವದ ಯುವ ತಂಡ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದನ್ನ ವಿಶ್ವಕಪ್​ ಟೂರ್ನಿಗೆ ಆಯ್ಕೆಯ ಮಾನದಂಡ ಎಂದೇ ಹೇಳಲಾಗಿತ್ತು. ಆ ಡು ಆರ್​​ ಡೈ ಫೈಟ್​ನಲ್ಲಿ ಸಾಮರ್ಥ್ಯ ಹೊರ ಹಾಕೋದ್ರಲ್ಲಿ ವಿಫಲರಾದ ಕೆಲ ಆಟಗಾರರು, ಐಪಿಎಲ್​ನಲ್ಲಿ ಅಬ್ಬರಿಸಿ ವಿಶ್ವಕಪ್​ ಟಿಕೆಟ್​ ಗಿಟ್ಟಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಇದೀಗ ಐಪಿಎಲ್​ಗೂ ಮುನ್ನವೇ ತಂಡದ ಆಯ್ಕೆಗೆ ಸೆಲೆಕ್ಷನ್​ ಕಮಿಟಿ ಮುಂದಾಗಿರೋದು ಸ್ಥಾನದ ನಿರೀಕ್ಷೆಯಲ್ಲಿದ್ದ ವರಿಗೆ ಶಾಕ್​ ನೀಡಿದೆ.

blank

ಕೋರ್​ ಟೀಮ್​ ಹಾಗೇ ಉಳಿಯಲಿದೆ ಅನ್ನೋದು ಮೂಲಗಳ ಮಾಹಿತಿಯಾಗಿದೆ. ಆದ್ರೆ, ಶಿಖರ್​ ಧವನ್​, ಶ್ರೇಯಸ್​ ಅಯ್ಯರ್​, ವಾಷಿಂಗ್ಟನ್​ ಸುಂದರ್​, ಯುಜುವೇಂದ್ರ ಚಹಲ್ ಹಾಗೂ ಭುವನೇಶ್ವರ್​ ಕುಮಾರ್​ ಆಯ್ಕೆಯ ಬಗ್ಗೆ ಹೆಚ್ಚು ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ. ಆರಂಭಿಕ ಸ್ಥಾನದಿಂದ ಹಿಡಿದು ಕೀಪರ್​, ಮಿಡಲ್​ ಆರ್ಡರ್​, ಸ್ಪಿನ್ನರ್​, ಆಲ್​ರೌಂಡರ್​ ಹಾಗೂ ಬೌಲರ್​ ವಿಭಾಗದಲ್ಲಿ ಸ್ಥಾನಕ್ಕೆ ತೀವ್ರತರದ ಪೈಪೋಟಿಯಿದೆ. ಹಾಗಾಗಿ ಈ ಪೈಪೋಟಿಯ ನಡುವೆ ಯಾವ 15 ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

Source: newsfirstlive.com Source link